ಆತ್ಮಾನುಸಾರಿಣಿ
ನಸುಕು ಕವಿದ ಮನಕೆ
ತುಸು ಮೆಲ್ಲಗೆ ನುಸುಳಿ,
ಗಾಳಿಗೂ ಆರದ
ಕಾಲಕೂ ಮಾಸದ,
ಒಲವಿನ ಬೆಳಕನು
ಹೊತ್ತು ತಂದ ಹೃದಯವೇ,
ಪಿಸು ಮಾತಲಿ ಪ್ರೀತಿಯ
ಪರ್ವತದಂತೆ ಪಸರಿಸಿ,
ಒಸು ನೊಂದ ಎದೆಗೆ
ಅಪ್ಪುಗೆಯ ದೀವಿಗೆ,
ನನ್ನ ಕನಸಿನ ಅರಮನೆಯಲಿ
ನಿನ್ನ ನಗುವಿನ ನಿತ್ಯ ಮೆರವಣಿಗೆ,
ಕಳೆದುಹೋದ ನನ್ನ ಪ್ರತಿಬಿಂಬವ
ನಿನ್ನ ಕಂಡ ಕೂಡಲೇ ಮನ ತುಂಬುವ,
ಭರವಸೆಯ ಸ್ವಾರಸ್ಯವೂ ನೀ ಸಖಿ
ಪಡೆದು ನಿನ್ನನು ಅನುಕ್ಷಣವೂ ನಾ ಸುಖಿ,
ಜೀವನದ ಎಲ್ಲಾ ಆಯಾಮಗಳ ಸಾಥಿ
ಮರು ಉಸಿರಿಗೂ ನೀನಾಗು ನನ್ನ ಸಂಗಾತಿ,
ಹೃದಯಪೂರ್ವಕ ವಿವಾಹ ವಾರ್ಷಕೋತ್ಸವದ ಶುಭಾಷಯಗಳು ಪುಟ್ಟ.
- Chethan M P
16 Nov 2023, 11:05 pm
Download App from Playstore: