ಅಪ್ಪ

ನನ್ನಪ್ಪನಿಗೊಂದು ಮಾತು ಜೀವನ ಎಂಬ ರಥದ ಸಾರಥಿ
ಸಂಸಾರ ಎಂಬ ಸಾಮ್ರಾಜ್ಯದ ಅಧಿಪತಿ

ಎಷ್ಟೆ ಕಷ್ಟ ಬಂದರೂ ಮಕ್ಕಳ ನಗುವಲ್ಲಿ ನೋವನ್ನು ಮರೆಯುವ ಗುಣವಂತ
ಪ್ರೀತಿಯ ಲೋಕಕ್ಕೆ ನೀನೇ ಸಿರಿವಂತ

ಮಕ್ಕಳ ಏಳ್ಗೆಗೆ ದಾರಿದೀಪ
ಮುಂದೆ ನಮ್ಮ ಜೀವನಕ್ಕೆ ನೀನೇ ನಂದಾದೀಪ

ಕಲ್ಮಶವಿಲ್ಲದ ಮನಸುಳ್ಳ ದಿಗ್ಗಜ
ನಮ್ಮ ಪಾಲಿಗೆ ನೀನೇ ರಾಜ

ದುಡಿಯುತ್ತಾನೆ ಮೈಯಲ್ಲಿ ರುಧಿರ ಸುರಿಯುವಂತೆ
ಲೆಕ್ಕಿಸದೇ ತನ್ನ ಪ್ರಾಣದ ಚಿಂತೆ

ಆಕಾಶಕ್ಕೂ ಮಿಗಿಲು ನಿನ್ನ ಮೇಲೆ ಪ್ರೀತಿ
ದೇವರಿಗಿಂತ ಹೆಚ್ಚು ನಿನ್ನ ಮೇಲೆ ಪ್ರತೀತಿ

ದಾರುಣ ಸ್ಥಿತಿಯಲ್ಲೂ ಧೈರ್ಯಗೆಡದ ಧೀರ
ಜಗತ್ತನ್ನೇ ಎದುರಿಸುವ ಶಕ್ತಿ ಹೊಂದಿರುವ ರಣಧೀರ

ಚಾಣಕ್ಯನಿಗಿಂತಲೂ ಚಾತುರ್ಯ ಹೊಂದಿರುವ ನನ್ನಪ್ಪ
ಯಾರೂ ಹೋಲಿಕೆ ಇಲ್ಲ ನಿನಗಪ್ಪ

ಸಂಸಾರ ಎಂಬ ರಣಾಜಿರದಲ್ಲಿ ಸೋಲನ್ನು ಕಲ್ಪನೆ ಕೂಡಾ ಮಾಡಿಕೊಳ್ಳದವನು
ಕಗ್ಗತ್ತಲೆಯಲ್ಲೂ ನಮಗೆ ಬೆಳಗಾಗಿ ನಿಂತಿರುವವನು

ಹಗಲು ರಾತ್ರಿ ಎನ್ನದೆ ದುಡಿಯುವ ಕಾಯಕ ಯೋಗಿ
ನಿರುದ್ಯೋಗಿಯಾದರೂ, ಸರ್ವಲೋಕವನ್ನೇ ಕೊಳ್ಳುವ ಉದ್ಯೋಗಿ

ಓ ಸ್ನಾತಕೋತ್ತರ ಪದವೀಧರ
ಹರಿಯುವದು ಜ್ಞಾನ ನನ್ನಲ್ಲಿ ನಿರಂತರ

ನಕ್ಷತ್ರಗಳು ನಾಚುವಂತೆ
ಸುನಾಮಿಗಳು ಅಬ್ಬರಿಸುವಂತೆ
ವಿಶ್ವವೇ ಬೆರಗಾಗುವಂತೆ
ದೈವವೇ ಕಣ್ತೆರೆಯುವಂತೆ
ನಮ್ಮ ಜೀವನಕ್ಕೆ ತನ್ನ ಪ್ರಾಣವನ್ನೇ ಪಣವಿಡುವ ನನ್ನಪ್ಪನಿಗೊಂದು ನಮನ..... ಸುನೀಲ್ ಬಿಜಿಎಂ ಕನ್ನಡ ....✍️

- Sunil Bgm kannada

15 Nov 2023, 08:06 pm
Download App from Playstore: