ಸ್ನೇಹಿತ
ಹೊಸ ಜಾಗ ಹೊಸ ಜನರ ನಡುವೆ ಪರಿಚಯದ ಮೊಗವಾದವನು ನೀ
ಮನೆಗೀಳಿನಲ್ಲಿರುವಾಗ ಮನದ ಮೂಲೆಯಲ್ಲಿ ಗೂಡು ಕಟ್ಟಿ ಕೊಟ್ಟವನು ನೀ
ನಾ ಆಡದೆ ಉಳಿದ ಮಾತನ್ನು ಅರ್ಥೈಸಿ ಕೊಂಡವನು ನೀ
ಮೊದಲೇ ಸಿಗಬಾರದಿತ್ತೆ ಎನ್ನುವಷ್ಟು ಮನಸ್ಸಿಗೆ ಹತ್ತಿರವಾದವನು ನೀ
ನಿಷ್ಕಲ್ಮಶ ಸ್ನೇಹ ಎಂಬ ಪದದ ಅರ್ಥ ತಿಳಿಸಿಕೊಟ್ಟವನು ನೀ
- ವರ್ಷಿಣಿ
- Varshini Hebbar
31 Oct 2023, 05:21 pm
Download App from Playstore: