ಬದುಕು

ಬದುಕೊಂದು ವಿಧಿ ನಡೆಸುತ್ತಿರುವ ಆಟ....
ಪ್ರತಿ ಹೆಜ್ಜೆಗೊಂದು ಕಲಿಸುತ ಪಾಠ ...
ನಡೆಯುತ್ತಿರು ನಗುವಿನಲಿ ಅವಮಾನಗಳ
ಮರೆಯುತಲಿ...
ಆತ್ಮಬಲದ ಎಂದೆಂದಿಗು ಇರಲಿ
ಸಾಗಲಿ ಜೀವನ ......//


ಕಾಣದ ಕಡಲಿಗೆ ಹಂಬಲಿಸುತಲಿ...
ಪಯಣವು ಮುನ್ನಡೆಯಲಿ....
ಆತ್ಮಸಾಕ್ಷಿ ಎದೆಗುಂದದಿಲ್ಲಿ...
ಸಾಗಲಿ ಜೀವನ...//

ಹಾರುವೆ ನೀ ಒಮ್ಮೆ ಎತ್ತರದಲಿ...
ಕಡೆಗಣಿಸಿದವರು ತಲೆ ಎತ್ತಿನೊಡಲಿ....
ಎಲ್ಲರೂ ನಿನ್ನನ್ನು ಪ್ರೀತಿಸುವಂತಾಗಲಿ
ಸಾಗಲಿ ಜೀವನ..//

ಕಂಡು ಕೇಳರಿಯದ ಹಿರಿಮೆಯಲಿ
ನಿಲ್ಲು ನೀನೊಮ್ಮೆ ಗೆಲುವಿನಲಿ
ಹರುಷವು ಕುಣಿಯುವುದು ನಿನ್ನಲಿ....
ಸಾಗಲಿ ಜೀವನ..//



ನಿಲ್ಲದ ಪಯಣ ಸಾಗುತಿರೆ ನೀ ನಗುವಿನಲಿ....

- Nirmala T

29 Oct 2023, 06:54 pm
Download App from Playstore: