ಇಂದಿನ ಭಾರತ
ದೇವಸ್ಥಾನ ಗುಡಿ ಗುಂಡಾರಗಳಿಗೆ ಕೋಟ್ಟ್ಯಂತರ ದೇಣಿಗೆ ನೀಡುವವರಿದ್ದಾರೆ ಇಲ್ಲಿ....
ಆದರೆ ಕಡು ಬಡವರಿಗೆ ಹೊಟ್ಟೆ ತುಂಬ ಊಟ ನೀಡುವರು ಇಲ್ಲವಯ್ಯ....
ಜಾತಿ ಮತ ಧರ್ಮಗಳೆಂದು ಹಲವಾರು ವರ್ಷ ಹೋರಾಟ ನಡೆಸುವರು ಇಲ್ಲಿದ್ದಾರೆ....
ಆದರೆ ಮನುಷ್ಯನ ಮೂಲ ಅಗತ್ಯಗಳಿಗೆ ಹೋರಾಡುವವರು ವಿರಳವಯ್ಯ......
ಸಾವಿರಾರು ಹೆಣ್ಣು ದೇವತೆಗಳನ್ನು ಪೂಜಿಸುವವರಿದ್ದಾರೆ ಇಲ್ಲಿ....
ಆದರೆ ಅದೇ ಹೆಣ್ಣನ್ನು ಕೀಳಾಗಿ ಕಾಣುವವರು ಎಲ್ಲೆಡೆಯೂ ಇದ್ದಾರಯ್ಯ.....
ದೇಶದ ಉನ್ನತಿಗೆ ಸಾಕಷ್ಟು ಯುವ ಜನತೆ ಶಕ್ತಿ ಇದೆ ಇಲ್ಲಿ....
ಆದರೆ ಯುವಜನತೆಯೇ ಹಾಳಾಗುತ್ತಿದೆ ಸಾಕಷ್ಟು ಕೆಟ್ಟ ಚಟಗಳಿಗೆ...
ದುಷ್ಟ ಬ್ರಿಟೀಷರ ಗುಲಾಮರಾಗಿದ್ದೇವು ಅಂದು...
ಕುತಂತ್ರಿ ರಾಜಕಾರಣಿಗಳ ಗುಲಾಮರಾಗಿದ್ದೇವೆ ಇಂದು.....
ಸತ್ಯ ,ಧರ್ಮ,ನ್ಯಾಯ, ನೀತಿ ರಾರಾಜಿಸುತಿತ್ತು ಈ ನಾಡಿನಲ್ಲಂದು.....
ಕೊಲೆ ,ಸುಲಿಗೆ,ಭ್ರಷ್ಟಾಚಾರ ,ಅತ್ಯಾಚಾರ ಪರ್ವತ ಶಿಖರವನ್ನೇರಿದೆ ಇಂದು......
- shaila yalashetti
09 Oct 2023, 12:30 am
Download App from Playstore: