* ನನ್ನಪ್ಪ
ಅಪ್ಪಾ ಅಂದ್ರೆ ಸಾಕು ಮುಖದಲಿ ಮೂಡುವುದು ಏನೋ ಹುರುಪು....
ಮಕ್ಕಳ ಬಾಳಲಿ ಬರುವ ಕಗ್ಗತ್ತಲನ್ನು ಓಡಿಸಿ ಬಾಳನು ಮಾಡುವನು ಬಿಳುಪು....
ಅಪ್ಪನಿಲ್ಲದಿರಬಹುದು ಭಾರೀ ಶ್ರೀಮಂತ....
ಆದರೆ ಅವನು ಪ್ರೀತಿಯಲ್ಲಿ ಅಂಭಾನಿಗಿಂತ ಸಿರಿವಂತ....
ಜೀವನದ ಮೌಲ್ಯಗಳನ್ನು ಕಲಿಸಿದಾತ....
ಅಮ್ಮನಿಲ್ಲದ ಸಮಯದಲ್ಲಿ ತಾಯಿಯಂತೆ ಜೋಗುಳ ಹಾಡಿದಾತ....
ನಿಸ್ವಾರ್ಥ ಭಾವದಿಂದ ಮಕ್ಕಳನ್ನು ಸಲಹುವಾತ ....
ಮಕ್ಕಳ ಕಣ್ಣಲಿ ನೀರು ಬರದಂತೆ ನೋಡಿಕೊಳ್ಳುವಾತ.....
ಹಾಸ್ಟೇಲ್ನಿಂದ ಮನೆಗೆ ಬಂದಾಗ ತಬ್ಬಿಕೊಂಡು ಮುದ್ದಾಡುವಾತ...
ಸಿಟ್ಟ ಮಾಡ್ಕೊಂಡ ಊಟ ಇಲ್ದೇ ಮಲ್ಕೊಂಡಾಗ ರಮಿಸಿ ಕೈ ತುತ್ತು ತಿನ್ನಿಸಿದಾತ.....
ಅಮ್ಮ ಇಲ್ಲ ಅನ್ನೋ ಕೊರಗನ್ನ ನೀಗಿಸಿದಾತ.....
ಸೋತಾಗ ಜಗವೇ ಕೀಳಾಗಿ ನೋಡಿದರೂ ನನ್ನ ಎಂದಿಗೂ ಬಿಟ್ಟುಕೊಡದಾತ.....
- shaila yalashetti
09 Oct 2023, 12:02 am
Download App from Playstore: