ನೀ ನನ್ನ ಪ್ರೇಯಸಿ

ನನ್ನ ತೋಳಲ್ಲಿ ನೀನು ನಿನ್ನ ಮಡಿಲಲ್ಲಿ ನಾನು
ನನ್ನ ಹೃದಯದ ಸೈಟಲ್ಲಿ ಜಾಗವೂ ಬೇಕೇನು...?
ಬಾಡಿಗೆಯು ಬೇಕಿಲ್ಲಾ ತೆರಿಗೆ ಕಟ್ಟುವ ಹಾಗಿಲ್ಲಾ
ಬಂದು ಆಕ್ರಮಿಸು ನಿನಗಷ್ಟೇ ಹಕ್ಕು ನೀಡಿರುವೆನಲ್ಲಾ...!

ಈ ಹೃದಯದ ಅರಮನೆಗೆ ರಾಣಿಯು ನೀನು
ಸೈನಿಕನು ಸೇವಕನು ಎಲ್ಲವೂ ನಾನು
ಈ ಬಡಪಾಯಿ ಹೃದಯಕೆ ಕಾಲಿಡುವೆಯಾ ಕಾಲಿಂದಲೇ
ತುಳಿದು ಕೊಲ್ಲವೆಯಾ ನಾನರಿಯೇ...? ಎಲ್ಲವು ನಿನ್ನಿಚ್ಚೇ,

ನನ್ನಿಚ್ಚೆಯಂತೆ ನಡೆದು ಒಪ್ಪಿದರೆ ನಿನ್ನ
ಮುಪ್ಪಿನಲ್ಲೂ ಬಿಡದೆ ಕಾಯುವೆನು ನಿನ್ನಾ
ಉಪ್ಪಿದ್ದರೂ ಇರದಿದ್ದರೂ ತಿಂದು ಬದುಕುವೇ
ಮಾಡಿ ಹಾಕಿದನ್ನಾ....

ನಾನು ನಿನಗಿಷ್ಟವಿದ್ದರೆ ಹೇಳು
ಕಷ್ಟಪಟ್ಟು ಇಷ್ಟಪಡುವುದು ನನಗೆ ಇಷ್ಟವಿಲ್ಲಾ
ಒಪ್ಪದಿದ್ದರೇ ಮರೆತು ಮರೆಯದೆಯೇ ಬದುಕುವೇ
ಇನ್ನುಳಿದ ದಿವಸ ಒಬ್ಬಂಟಿಯಾಗಿ....!..
,,,,prashi yadav,,,,,,

- Prashanth

08 Oct 2023, 01:19 pm
Download App from Playstore: