ನನ್ನ ಹುಡ್ಗ
ಎಷ್ಟು ಹೊತ್ತು ಓದ್ತೀಯಾ ಅಂತ ಕೇಳ್ಲಿಲ್ಲ ನನ್ನ ಹುಡ್ಗ,
ಮೂರ್ ಹೊತ್ತು ಎಮ್ಮೆ ತರ ತಿನ್ನೋದು ಮಾತ್ರ ಬಿಡಬೇಡ ಎಂದ.....
ಎಷ್ಟ phone use ಮಾಡ್ತೀಯಾ ಅಂತ ಬೈಯ್ಲಿಲ್ಲಾ ನನ್ನ ಹುಡ್ಗ ,
daily extra data pack ಅವ್ನೆ ಹಾಕಿಸ್ತೀನಿ ಎಂದ ....
ಜಾಸ್ತಿ ಹೊತ್ತು ನಿದ್ದೆ ಮಾಡೆಂದ ನನ್ನ ಹುಡ್ಗ ,
ಆರೋಗ್ಯ ಚೆನ್ನಾಗಿರತ್ತಂತಲ್ಲ ನನ್ನ ಕಾಟ ಸ್ವಲ್ಪ ಹೊತ್ತಾದ್ರು ತಪ್ಪುತ್ತೆ ಎಂದ....
ಚೆನ್ನಾಗಿ ಓದಿ ಡಿಗ್ರೀ ಮಾಡು ಅನ್ಲಿಲ್ಲ ನನ್ನ ಹುಡ್ಗ,
ಡಿಗ್ರೀ ಆಗ್ಲಿಲ್ಲ ಅಂದ್ರು ಪರವಾಗಿಲ್ಲ ಕಸಮುಸುರೆ ಮಾಡಕ್ಕಾದ್ರು ಕಲಿಯಂದ ....
valentine's day ಗೆ gift ಏನೂ ಕೊಡಲಿಲ್ಲ ನನ್ನ ಹುಡ್ಗ,
ಯಾಕ್ ಅಂದ್ರೆ costly ಹೃದಯಾನೇ ಕೊಟ್ಟೀನಿ ಎಂದ........
- shaila yalashetti
07 Oct 2023, 10:21 pm
Download App from Playstore: