ಮರೆತೂ ಮರೆಯದಿರು ಮನವೇ...

ಅಂದವಾದ ನಿನ್ನ ಕಣ್ಣ ಕುಡಿನೋಟ,
ತಂದಿದೆ ಮನದಲ್ಲೇನೋ ತೊಳಲಾಟ,

ನಿನ್ನ ಅಂದದ ಮೊಗವ ಕಾಣಲು,
ಕಾತೊರೆದು ಕುಳಿತಿವೆ ನನ್ನ ಕಂಗಳು,
ಇನ್ನು ಅರ್ಥವಾಗದೇ ನಿನಗೆ ಆ ಕಂಗಳಾ ಅಳಲು?,

ಏನ ಮಾಡಿದೆ ಮೋಡಿ,
ಕಣ್ಣಂಚಿನಲಿ ನೀ ನೋಡಿ,
ಪ್ರೀತಿಯಲಿ ಕೇಳುವೆ ನಾ ಧೈರ್ಯವ ಮಾಡಿ,
ಪ್ರೀತಿಯರಿತೆಯಾದರೆ ತಿಳಿಸು ನೀ ನೆಪದಿ ಕರೆಯನು ಮಾಡಿ,

ದೂರ ಮಾಡದಿರು ನನ್ನ ಬೀಸೋ ಗಾಳಿಗೆ ತೂರಿ,
ಕಾದು ಕುಳಿತಿದೆ ಮನ ತನ್ನ ಮಂಡಿಯ ಊರಿ,
ನಿನಗಾಗಿ ಬರೆದೆ ಕವನ ಮನದ ಇಂಗಿತ ತೋರಿ,

ಮರೆತೂ ಮರೆಯದಿರು ಮನವೇ,
ನನ್ನೊಲವಿನಾ ಒಲವೇ...
----- tippu -----





- tippu

10 Sep 2023, 12:01 am
Download App from Playstore: