ಶೀರ್ಷಿಕೆ : ಸ್ಮರಣೆ
ಕಾಣದೆ ಕಂಡೆನು ಒಂದು ದಿನ
ಅದುವೇ ನಮ್ಮ ಭಾರತ ಮಾತೆ
ಬಡತನದ ಬೆಳದಿಂಗಳ ದೀಪ
ವೀರ ಸ್ವಾಮಿ ಸೀತಾಮಾತೆಯ ಪುತ್ರ
ಸೆಪ್ಟಂಬರ್ 5 ರಂದು ಜನಿಸಿದ ಕಣ್ಮಣಿ
ದಕ್ಷಿಣ ಭಾರತಕ್ಕೆ ಕಾಲಿಟ್ಟ ಸರ್ವಪಲ್ಲಿ
ವಿದ್ಯಾರ್ಥಿ ವೇತನದಿ
ಪ್ರೌಢ ಶಿಕ್ಷಣ ಮುಗಿಸಿದ ಪೌರ
ಕ್ರಿಶ್ಚಿಯನ್ ವಿದ್ಯಾ ಮಂದಿರದಿ
ತತ್ವಜ್ಞಾನಿ ಪದವಿ ಪಡೆದ ಪಂಡಿತ
ನೈತಿಕತೆ ವೇದಾಂತ ವಿಚಾರವಾದಿ
ಸ್ನಾತಕೋತರ ಪದವಿಯ ವಿದ್ಯಾರ್ಥಿ
ದೇಶ ಕಟ್ಟುವ ನಾಯಕ
ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕ ಪಠಿಸಿ
ಗಮನ ಸೆಳೆದ ಸಾಧಕ
ದೇಶದೊಳಗಿನ ಕಲಹಗಳಿಗೆ
ನಾಂದಿ ಹಾಡಿದ ಸುಧಾರಕ
ದೇಶದ ಅಭಿವೃದ್ಧಿಗೆ ಶ್ರಮಿಸಿದ ಗೀತಾಂಜಲಿ
ನಮ್ಮ ದೇಶದ ರಾಷ್ಟ್ರಪತಿ
ಹಸಿದವರ ಪಾಲಿನ ಅಮೃತವಾಣಿ
ಅನಾಥ ಮಕ್ಕಳ ಮಧುರ ವಾಣಿ
ಅಂದ ಕಂದಮ್ಮಗಳ ಕಣ್ಮಣಿ
ಶಿಕ್ಷಕ ವೃತ್ತಿಯ ಆಶಾಕಿರಣ
ಭಾರತ ಶಾಲೆಗಳಲ್ಲಿ ಭಾವ ಶಿರೋಮಣಿ
ನಮ್ಮಯ ಭಾರತರತ್ನ
ಅವರಿಗೊಂದು ಅಭಿಲಾಷೆ
ಹೆತ್ತವರ ಮುದ್ದಿನ ಕೂಸಗುವಾಸೆ
ಅವರಿಗೊಂದು ಕಡೆಯ ಆಸೆ
ಆದರ್ಶ ಶಿಕ್ಷಕರಾಗುವ ಆಸೆ
ಅವಿಸ್ಮರಣೀಯವಾಗಿ ಅಚ್ಚರಿಯಾಗಿ
ಎಲ್ಲರ ಮನದಲ್ಲಿ ಉಳಿಯುವ ಆಸೆ
ಅವರೇ ನಮ್ಮ ಬ್ರಹ್ಮ ವಿದ್ಯಾ ಭಾಸ್ಕರ
ಅಂದು ಅವರು ಜನ್ಮ ದಿನದ ನೆನಪು
ಇಂದು ಶಿಕ್ಷಕರಿಗೆ ಗೌರವ ಸಲ್ಲಿಸುವುದು ಶುಭಾಶಯಗಳು ಕೋರುವ ಸವಿನೆನಪು
ಅದುವೇ ನಮ್ಮ ಶಿಕ್ಷಕರ ದಿನವು
ಅವರೇ ನಮ್ಮಯ ಶಿಕ್ಷಕರು
ಅವರೇ ನಮ್ಮ ಸರ್ವಪಲ್ಲಿ ರಾಧಾಕೃಷ್ಣನ್ ರವರು
ನಾಡಿನ ಸಮಸ್ತ ಗುರು ವೃಂದಕ್ಕೆ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಚಿರಕಾಲ ಸ್ಮರಿಸುವನು
ಶಿರವಾಗಿ ನಮ್ಮ ಗುರುಗಳ ಎದುರು.......
ಬರಹ
ಸಂತೋಷ ಕುಮಾರ್ ಎನ್
ಚಿನ್ನದ ನಾಡು
ಕೋಲಾರ
- santhosh kumar.n
05 Sep 2023, 08:51 am
Download App from Playstore: