ರಕ್ಷಾಬಂಧನ

*ಅಳಿಸಲಾಗದ ಅನುಬಂಧ ಸಹೋದರತೆಯ ಸಂಬಂಧ.
ತಂಗಿಯ ಪ್ರೀತಿ ತಪಸ್ಸಿಗೂ ದೊರೆಯದ ಋಣಾನುಬಂಧ.

ಅಕ್ಕನ ಅಕ್ಕರೆಯು ಸಕ್ಕರೆಯ ಸವಿಯದು ಅಕ್ಷಯದಂತೆ.
ಸಹೋದರತೆಯೇ ರಕ್ತ ಸಂಬಂಧಿಯ ಸ್ನೇಹ ಸಂಬಂಧ.

ರಕ್ಷಣೆ ನೀಡಲೆಂದೆ ಜೊತೆಯಲ್ಲಿ ಹುಟ್ಟಿದ ಸಹೋದರರು.
ಮಾತೃ ವಾತ್ಸಲ್ಯ ದಾರೆಯೆರಿಯುವ ಸಹೋದರಿಯರು.

ಸಧಾ ನಮ್ಮ ಒಳಿತಿಗಾಗಿ ದ್ಯಾನಿಸುವ ಹೃದಯವಂತರು.

ಶ್ರೀ ರಕ್ಷೆ ರಾಖಿ ಕಟ್ಟುವ ಸುಧೀನವೇ ರಕ್ಷಾಬಂಧನ.
ಇಂತಹ ಭಾಂದವ್ಯ ಸಿಕ್ಕಿರಲು ಇಂದು ನಾನೆ ಧನ್ಯ.
ನನ್ನೆಲ್ಲ ಸಹೋದರಿಯರಿಗೆ ರಕ್ಷಾಬಂಧನದ ಶುಭಾಶಯಗಳು

- Shankru Badiger

30 Aug 2023, 11:30 pm
Download App from Playstore: