ನನ್ನಾಕೆಗೆ ನನ್ನ ಮನದ ಮಾತು

ಅಂಗೈ ತುಂಬಾ ಬಣ್ಣದ ಚಿತ್ತಾರಗಳು/
ಎಷ್ಟು ಸುಂದರ ಗೆಳತಿ ನಿನ್ನ ಕರಗಳು//

ಮನಸ್ಸಿನ ತುಂಬಾ ನೂರು ಬಣ್ಣ/
ಬಿಡದೆ ಸೆಳೆಯುತ್ತಿದೆ ನನ್ನ ಕಣ್ಣ//

ಅವೆಷ್ಟು ಅದೃಷ್ಟ ಮಾಡಿದೆಯೋ ಆ ಮದರಂಗಿ/
ನಿನ್ನ ಕೋಮಲ ಕರದಲ್ಲಿ ಮಲಗಿ//

ಮನಸ್ಸಿನ ತುಂಬಾ ನೂರು ಚಿತ್ತಾರ/
ಬಿಡದೆ ಸೆಳೆಯುತ್ತಿದೆ ಹಲವು ವಿಚಾರ//

ಮನದ ಮಾತಿಗೆ ರಂಗು ಚೆಲ್ಲಿ/
ಅರಳುತ್ತಿದೆ ಕೈಯ ಮದರಂಗಿಯ ರಂಗವಲ್ಲಿ/

ನವಿಲ ಗರಿಯ ಬಣ್ಣ ಮೂಡಿ/
ಸುಂದರ ರಂಗೋಲಿ ಮನದುಂಬಿ ನೋಡಿ//

ಕೈಯ ತುಂಬಾ ಪಸರಿಸಿದೆ ರಂಗು ರಂಗಿನ ಮದರಂಗಿಯ ಕವಲು/
ಮನದಲ್ಲಾಸೆ ಮೂಡಿದೆ ನಿನ್ನ ಕೈಯ ಎನ್ನ ಕೈಯಲ್ಲಿ ಬೆಸೆಯಲು//

ಅನಿಸುತ್ತಿದೆನಗೆ ನಾನಾಗಬಾರದಿತ್ತೆ ನಿನ್ನ ಕೈಯ ಮದರಂಗಿ
ಎಂದೆಂದಿಗೂ ನೀ ಇರು ನನ್ನ ಬಾಳಲಿ ರಂಗಾಗಿ//

- Shankru Badiger

24 Aug 2023, 11:11 pm
Download App from Playstore: