ಮದರಂಗಿ
ನೀ ಕರಗಳಿಗೆ ಶೃಂಗರಿಸಿದ ಮದರಂಗಿಯ ಸುವಾಸನೆ
ಎನ್ನ ಮನಕೆ ನೀಡಿದೆ ಸಂತಸದ ಸಂಕ್ರಾಂತಿಯ ಭಾವನೆ
ಚೆಲುವಿನ ಚಿತ್ತಾರದ ತರಹ ಮೂಡಿದೆ ಸಂಭಾಷಣೆ
ಪ್ರೀತಿಯ ಪಿಸುಮಾತಿಗೆ ಚಿಮ್ಮಿದ ಒಲವಿನ ಆರಾಧನೆ॥
ಮದರಂಗಿಯು ಹೊರ ಸೂಸುತಿದೆ ಪ್ರೇಮ ಪಯಣ
ಮನದಾಳದ ಭಾವನೆಗಳ ಸಂಭ್ರಮದ ಸಂಕೀರ್ತನ
ನೋವು ನಲಿವನು ಮರೆತು ನಕ್ಕು ನಲಿಯುವ ಕವನ
ಅವಳಲ್ಲಿ ಒಂದಾಗಿ ಮೈಮರೆಯುವ ಸಾಧನ॥
ಅಕ್ಷರಗಳ ನಡುನಡುವೆ ಭಾವನೆಗಳ ಸಂಭ್ರಮ
ಅರಿಯುವ ಮನವಿರಲು ಬೆಳದಿಂಗಳ ಚಂದ್ರಮ
ಪವಿತ್ರವಾದ ಪ್ರೀತಿಗೆ ಸಾಕ್ಷಾತ್ಕಾರವೇ ಪರಂಧಾಮ
ಎಲ್ಲರೊಳಗೊಂದಾಗಿ ಬೆರೆತರೆ ಅದೇ ಆತ್ಮ ಸಂಭ್ರಮ॥
ನಿನ್ನೊಲವಿನ ಪ್ರೀತಿಯ ನಾ ಬಲ್ಲೆ ಗೆಳತಿ
ಹಚ್ಚಿರುವೆ ಮನದಾಳದಲಿ ಒಲವಿನ ಪಣತಿ
ಮಂದಾರ ಪುಷ್ಪದಂತೆ ನಿನ್ನ ಸಂಪ್ರೀತಿ
ಇರಲಿ ನನ್ನೊಂದಿಗೆ ಸದಾ ಹಸಿರಿನ ರೀತಿ॥
- Shankru Badiger
24 Aug 2023, 11:10 pm
Download App from Playstore: