ಕವನದ ಹೆಸರು :- ಭಾರತಾಂಬೆಗೆ ನನ್ನ ನಮನ
ಕವನದ ಹೆಸರು :- ಭಾರತಾಂಬೆಗೆ ನನ್ನ ನಮನ
ರಚಿಸಿದವರು:-ಇಮ್ತಿಯಾಜ್ ಭರಮಸಾಗರ ***********
ಮನೆ ಮನದಲ್ಲಿಪುಟ್ ಎದ್ದೇಳಲಿ ದೇಶಭಕ್ತಿಯ ತರಂಗ
ಭಾರತ ಭೂಮಿ ಉದ್ದಗಲಕ್ಕೂ ಹಾರಲ್ಲಿ ತಿರಂಗ
ಇದರ ಮುಖಾಂತರ ತಿಳಿಸುವೆ ಭಾರತಂಬೆಗೆ ನನ್ನ ನಮನ
ಅದಕ್ಕಾಗಿ ಬರೆದಿರುವೆ ಈ ಒಂದು ಸಣ್ಣ ಕವನ
ಈ ಹಿಂದೆ ನಮಗಿತ್ತು ಬ್ರಿಟಿಷರ ಕಾಟ
ಅದಕ್ಕಾಗಿ ನಡೆಸಿದರು ನಮ್ಮ ಜನ ದೊಡ್ಡ ದೊಡ್ಡ ಹೋರಾಟ
ಒಗ್ಗಟ್ಟಿನಿಂದ ಒಂದಾದರೂ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಹಟ
ಆದರೂ ಅವರಲ್ಲಿ ಇತ್ತು ಬ್ರಿಟಿಷರನ್ನು ಓಡಿಸಬೇಕೆಂಬ ದಿಟ್ಟ ನೋಟ
ಇದರ ಫಲವಾಗಿ ಇಂದು ರಾರಾಜಿಸುತ್ತಿದೆ ಈ ನಮ್ಮ ರಾಷ್ಟ್ರಧ್ವಜದ ಬಾವುಟ
ಇದು ಪ್ರಜಾಪ್ರಭುತ್ವದ ಶ್ರೇಷ್ಠ ಹಬ್ಬ
ಆಗಸ್ಟ್ 15 ರಂದು ಸ್ವಾತಂತ್ರದ ದೇಶದ ರಾಷ್ಟ್ರೀಯ ಹಬ್ಬ
ಮನೆ ಮನದಲ್ಲಿ ಪುಟದ್ದೇಳಲಿ ದೇಶಭಕ್ತಿಯ ತರಂಗ
ಭಾರತ ಭೂಮಿ ಉದ್ದಗಲಕ್ಕೂ ಹಾರಲಿ ತಿರಂಗ
ಇದರ ಮುಖಾಂತರ ತಿಳಿಸುವೆ ಭಾರತಾಂಬೆಗೆ ನನ್ನ ನಮನ
ಅದಕ್ಕಾಗಿ ಬರೆದಿರುವೆ ಈ ಒಂದು ಸಣ್ಣ ಕವನ
ಬೋಲೋ ಭಾರತ್ ಮಾತಾ ಕಿ ಜೈ
ಜೈ ಹಿಂದ್, ಜೈ ಭಾರತ್ ಮಾತಾ ಕಿ ಜೈ
- Imtiyaz Ahmed
16 Aug 2023, 04:43 pm
Download App from Playstore: