ಕವನದ ಹೆಸರು:- ಕವನ ಕಾವ್ಯ ಬರೆಯುವುದು ನನ್ನ ಹವ್ಯಾಸ
ರಚಿಸ
ಕವನದ ಹೆಸರು:- ಕವನ ಕಾವ್ಯ ಬರೆಯುವುದು ನನ್ನ ಹವ್ಯಾಸ
ರಚಿಸಿದವರು:-ಇಮ್ತಿಯಾಜ್ ಭರಮಸಾಗರ ***********
ವೃತ್ತಿಯಲ್ಲಿ ನಾನು ವಿದ್ಯುತ್ ಗುತ್ತಿಗೆದಾರ
ಕವನ ಕಾವ್ಯ ಬರೆಯುವುದು ನನ್ನ ಹವ್ಯಾಸ
ಸುಮ್ಮನೆ ಇದ್ದರೂ ಬಿಜಿ ಇದ್ದರೂ ಮನಸ್ಸು ಬಿಡದು
ಏನಾದರೂ ಒಂದು ಬರೆ ಎದ್ದೇಳು ಎನ್ನುವ ಚಂಚಲ ಮನಸ್ಸು
ರಾತ್ರಿಯಲ್ಲಿ ತಲೆ ದಿಂಬು ಪಕ್ಕ ಪೆನ್ನು ಪೇಪರ್
ಹಗಲಲ್ಲಿ ಜೋಬು ತುಂಬಾ ಪೇಪರು ಪೆನ್ನು
ಯಾವ ನಿಮ್ಮಶದಲ್ಲಿ ಬರೆಯುವೆನು ತಿಳಿಯದು ಕವನವನ್ನು
ಹಾಗಾಗಿ ಸಿದ್ಧತೆ ಮಾಡಿಕೊಂಡಿರುವನು
ಬರೆದ ಕವನವನ್ನು ವಾಟ್ಸಾಪ್ ಮಾಡುವೆನು
ಗೆಳೆಯರಿಗೆ ಗೆಳೆಯತಿಯರಿಗೆ ಓದಿ ಕಮೆಂಟ್ ಮಾಡಿ ಎನ್ನುವೆನು
ಓದಿದವರು ಸಂತೋಷ ಪಡುವರು ಲೈಕ್ ಮಾಡುವರು
ಕೆಲವರು ಸುಮ್ಮನೆ ಇರುವವರು
ಕವನದ ಹವ್ಯಾಸದಿಂದ ಚಿಂತೆ ದೂರಾಗದು
ಬಿಪಿ ಶುಗರ್ ಬಾರದು
ಕವನ ಕಾವ್ಯ ಕಾದಂಬರಿ ಓದುವ ಹವ್ಯಾಸ ಇರಬೇಕು
- Imtiyaz Ahmed
16 Aug 2023, 04:38 pm
Download App from Playstore: