ಪ್ರೇಮಿಗಳು
ಹೊಸಬರು ನಾವು ಪ್ರೀತಿಯಲ್ಲಿ
ಹಳೆ ಉಡುಗೆ ಸಂಪ್ರದಾಯ
ದೇವರ ನಾಡಿನಲ್ಲಿ
ಒಲವಿನ ಹಾಯಿ ದೋಣಿಗೆ
ದೇವರೇ ಸಾಕ್ಷಿ
ಹಳ್ಳಿಯಾ ಹಸಿರಲ್ಲಿ ನಗರದ ವಿಷವಿಲ್ಲ
ದೇಹದಾಸೆಯ ಲಾಲಸೆ ಪ್ರೀತಿ ಅಲ್ಲ
ಕಣ್ಣೋಟ ಮಾತುಗಳೇ ಮುನ್ನುಡಿಯ ಸಾಲು
ಚುಂಬನವು ಅಪ್ಪುವಿಕೆ ಇಲ್ಲ ನಮ್ಮೊಳಗೆ
ನಮ್ಮ ಪ್ರೀತಿ ಪರಿಶುದ್ಧ ಹಾಲಿನ ಹಾಗೆ
ಮದುವೆಯಲಿ ಬೆರೆತಾಗ ಪರಿಪೂರ್ಣ ಕವಿತೆ
ಮೈಮುಟ್ಟುವಾ ಸರಸ ಚೆಲ್ಲಾಟವಿಲ್ಲ
ಪ್ರಣಯ ಬೆಸುಗೆಯ ಮಬ್ಬು ಮಸುಕಿಲ್ಲ
ನಾವು ಹೊಸಬರು ಈ ಕಾಲದಲ್ಲಿ
ಹಳಬರು ಗುಣ ಸಂಪ್ರದಾಯದಲಿ
ಹಿರಿಯರ ಮಾತಿಗೆ ತಲೆ ಬಾಗುತ್ತೇವೆ
ಧರ್ಮ ಹಾದಿಯ ಬೆಳಗಿ ಬೆಳೆಯುತೇವೆ
#ಮಣಿರಾಜ್_ಮಂಗಳೂರು
- mani RAJ
14 Aug 2023, 06:40 pm
Download App from Playstore: