ದ್ವೇಷ ಕಿಚ್ಚಿಲ್ಲದ ಸ್ವಾತಂತ್ರ್ಯ ನನ್ನದು
ಬುದ್ಧ ಅಂಬೇಡ್ಕರರ ನೆಲದಲ್ಲಿ
ನಾನೊಬ್ಬ ಸ್ವಾತಂತ್ರ್ಯ ಪಕ್ಷಿ
ಇಲ್ಲಿ ಎಲ್ಲರು ಸಮಾನರು
ಇಲ್ಲಿ ಎಲ್ಲರು ಮನುಷ್ಯರು
ಇಲ್ಲಿದೆ ನ್ಯಾಯ ಪಶು ಪಕ್ಷಿಗೂ
ಗಿಡ ಮರ ಬಳ್ಳಿಗೂ.
ನಮ್ಮ ಶಾಂತಿಯ ನೆಲದಲ್ಲಿ
ಅಶಾಂತಿಯ ಆತ್ಮಗಳು
ಬಂದವರೆಲ್ಲರು ಹೊರಗಿನವರು
ಪ್ರಶಾಂತ ನೀರಿನಲ್ಲಿ ಕಲ್ಲು ಎಸೆದು
ಅಲೆಗಳು ಸೃಷ್ಟಿಸಿದಂತೆ
ಇವರ ಕೆಲಸಗಳು.
ನಮ್ಮ ಅರಿವು ನಮಗಿದೆ
ನಾವು ಯಾರು? ನಮ್ಮವರು ಯಾರು?
ತಿಳಿದವರು ನಾವು
ಮನುಷ್ಯರು ನೀವು
ನಮ್ಮಂತೆ ಮನುಷ್ಯರಾಗಿ ಬಾಳಿ
ನಮ್ಮ ನೆಲದಲ್ಲಿ ನಮಗೆ
ನೆಮ್ಮದಿಯಾಗಿ ಬದುಕಲು ಬಿಡಿ
ನಿಮ್ಮ ದ್ವೇಷ ನಿಮ್ಮ ಕೀಚ್ಚು ನಿಮ್ಮಲ್ಲಿರಲಿ
ದ್ವೇಷ ಕಿಚ್ಚಿಲ್ಲದ ಸ್ವಾತಂತ್ರ್ಯ ನಮ್ಮದಾಗಲಿ.
- vamu gavada
13 Aug 2023, 11:44 pm
Download App from Playstore: