ಧನ್ಯವಾದ

ನಾ ಒಲವ ಹೇಳ ಬಯಸಿದೆ
ನೀ ಒಲವಿಲ್ಲದೆ ದೂರ ಸರಿದೆ...
ಸುಡುತಿದೆ ಈ ನಿನ್ನ ಮೌನ..
ನರಳುತಿರುವೆ ನಾ ಪ್ರತಿದಿನ, ಪ್ರತಿಕ್ಷಣ
ಕುರುಡು ಪ್ರೇಮವೆಂದು ತಿಳಿದಿದ್ದರೂ ನಾ ಸೋತೆ..
ನನ್ನನ್ನು ನಾ ಗೆಲ್ಲದಂತೆ ಮಾಡಿದೆ ಈ ಚಿಂತೆ..
ಪ್ರೀತಿ ಕಲಿಸಿದ್ದಕ್ಕೆ , ಪ್ರೀತಿಸಿ ಮರೆತಿದ್ದಕ್ಕೆ ಧನ್ಯವಾದ..
ಕಾಯುವುದ ಕಲಿಸಿದ್ದಕ್ಕೆ, ಕಾರಣವಿಲ್ಲದೆ ದೂರಾಗಿದ್ದಕ್ಕೆ ಧನ್ಯವಾದ...


ತನುಮನಸು✍️

- Tanuja.K

13 Aug 2023, 07:09 pm
Download App from Playstore: