ಕವನಗಳಲಿ ನೀ ನನ್ನವನು
ಕಾರಣವಿರದೆ ನಿನ್ನ ಪ್ರೀತಿಸಿದೆ
ನಾನಿರಲಾರೆ ನಿನ್ನ ನೆನಪಿಸದೆ..
ಕಾಲವು ಒಲವ ದೂರಾಗಿಸಿತು
ಕವನಗಳು ನಮ್ಮನು ಒಂದಾಗಿಸಿತು..
ಯಾರ ಹಂಗು ಇಲ್ಲ ನನಗೆ
ಕವನದಲಿ ನೀ ಸಂಪೂರ್ಣ ನನಗೆ..
ನಾ ಮೆಚ್ಚಿದಂತೆ ನಿನ್ನ ಬಣ್ಣಿಸುವೆ
ನಿನ್ನ ಕಾಡುತ ಮತ್ತೆ ಮತ್ತೆ ಪ್ರೀತಿಸುವೆ..
ಕರುಣೆಯ ಹೃದಯ ನಿನ್ನದು
ನಿನ್ನ ಕಲ್ಪನೆಯಲೆ ನಾನಿರುವುದು..
ಮೌನಿಯಾಗಿರುವೆ ಏಕೆ ಇನ್ನು
ಬರಬಾರದೆ ನನ್ನೊಲವೆ ನೀನು..
ತನುಮನಸು✍️
- Tanuja.K
13 Aug 2023, 06:36 pm
Download App from Playstore: