ಸಂತಸದಿ ಅರಳಿದ ಮನ
ಮುಸ್ಸಂಜೆ ಏಕಾಂಗಿ ಹೊರಟಿರಲು
ದಿನಕರನು ವಿಶ್ರಾಂತಿಗೆ ತೆರಳಿರಲು
ಬಾನಲ್ಲಿ ಮೋಡಗಳು ಚಿತ್ರಿಸಿರಲು
ಸಂಜೆಗೆಂಪು ಬಣ್ಣಗಳು ತುಂಬಿರಲು
ನೀನು ಎದುರು ನಡೆದು ಬರುತಿರೆ
ಕಿರುನಗೆಯಲಿ ನಿನ್ನತ್ತ ನನ್ನ ಸೆಳೆದಿರೆ
ಪ್ರೀತಿಯಲಿ ಹೃದಯ ಅರಳುವುದು
ಸಂಭ್ರಮ ಸಂತಸದಿ ಅರಳಿದೆ ಮನವಿದು
ಕಂಗಳ ನೋಟ ತನುವೆಲ್ಲ ಸಂಚರಿಸಿ
ಸಿಹಿ ಕಂಪನ ಎದೆಯೊಳಗೆ ನಡುಗಿಸಿ
ಬೇಡುವೆ ಪ್ರೇಮ ನಿವೇದನೆ ಸ್ವೀಕರಿಸಿ
ಜೊತೆಯಾಗಿ ಬರುವೆಯಾ ನನ್ನರಸಿ
ಖಾಲಿ ಇರುವ ಹೃದಯ ಗುಡಿಯಲಿ
ಪ್ರೇಮ ಮೂರ್ತಿಯಾಗಿ ನೀ ನೆಲಸು
ಹೊನ್ನಕಿರಣದಿ ಕತ್ತಲೆಯ ಓಡಿಸು
ಕೈಹಿಡಿದು ನನ್ನ ಬಾಳನ್ನು ಬೆಳಗಿಸು
✍️ನಿಮ್ಮವನೇ ಶಂಕ್ರು
- Shankru Badiger
10 Aug 2023, 05:20 pm
Download App from Playstore: