ಮನದಾಸೆ

ಪ್ರೀತಿಯ ಅಂಬಾರಿಯೋಳು ಸಾಗಲು ಬಯಸಿಹೆನು,
ಕೈಹಿಡಿದು ಕರೆದೊಯ್ಯುವೆಯ ಅಂಬಾರಿಯೋಳು.
ಪ್ರೀತಿಯಲಿ ಜಗವ ಮರೆಯಲು ಬಯಸಿಹೆನು,
ತೋರುವೆಯ ನನ್ನ ನಿನ್ನ ಜಗದೊಳು.

ನನ್ನವರ ಅಗಲಿ ನಿನ್ನ ಸೇರುತ್ತಿರುವೆನು,
ನಿನ್ನವರ ಪ್ರೀತಿ ನನ್ನೊಂದಿಗೆ ಹಂಚಿಕೊಳ್ಳುವೆಯ.
ನನ್ನದೆಲ್ಲವ ನಿನಗೆ ಅರ್ಪಿಸಿರುವೆನು,
ಆಗಲೇನು ನಿನ್ನ ಅರ್ಧಾಂಗಿಯ .
- ಮೈನ


- myna ig-@voice_of_.heart__

09 Aug 2023, 11:40 pm
Download App from Playstore: