chandira
ರಾತ್ರಿ ವೇಳೆ ರಾಜುವಿನ ತಾಯಿ ಅವನಿಗೆ ಊಟ ಮಾಡಿಸುತಿದ್ದಾರೆ . ಆಗ ಮೇಲೆ ನೋಡಿದ ರಾಜು)
ರಾಜು :-ಅಮ್ಮ ಮೇಲೆ ಏನಿದೆ?
ಅಮ್ಮ :- ಆಕಾಶ
ರಾಜು:-ಹೌದಾ? ಅದರಲ್ಲಿ ಕೆಲವು ಚುಕ್ಕಿ ಹಾಗೆ ಇದೆ.
ಆ.. ಅದೇನು ಚಪಾತಿ ಹಾಗೆ ಇದೆ??
ಅಮ್ಮ: ಮಗು ಅದು ಚುಕ್ಕಿ ಅಲ್ಲಪ್ಪ ನಕ್ಷತ್ರ. ಅದು
ಚಪಾತಿ ಅಲ್ಲಾ ಚಂದ್ರ ಕಣೋ
ರಾಜು : ಹೌದಾ ನಾನು ಚಂದ್ರನ ಜೊತೆ
ಮಾತನಾಡುತ್ತೇನೆ.
ಅಮ್ಮ: (ನಗುತ್ತಾ) ಆಯ್ತು
( ಅಮ್ಮ ಮಲಗಲು ಹೊರಟರು)
ರಾಜು: ಚಂದ ಮಾಮ .......
( ರಾಜುವಿನ ಮುಗ್ಧತೆಗೆ ಚಂದಿರ ಪ್ರತ್ಯಕ್ಷನಾದ)
ಚಂದ್ರ: ಏನು ರಾಜು
ರಾಜು: ಏನು ಇಲ್ಲ ಇಡೀ ಹಳ್ಳಿ ಜನ ಮಲಗಿದ್ದಾರೆ.
ನೀನು ಮಲಗೂದಿಲ್ಲವಾ?
ಚಂದ್ರ: ಇಲ್ಲಪ್ಪ ನಾನು ಮಲಗಿದ್ರೆ ಹಳ್ಳಿಗೆ ಬೆಳಕು
ನೀಡೋರು ಯಾರು? ಅಲ್ವಾ
ರಾಜು : ಹೌದು ಆದ್ರೆ ನಿನ್ ಮನೆ ಎಲ್ಲಿದೆ?
ಚಂದ್ರ : ನನಗೆ ಮನೆ ಇಲ್ಲ ಪುಟ್ಟ
ರಾಜು : ಹಾಗಾದ್ರೆ ನಿಂಗೆ ಚಳಿ ಬಿಸಿಲು ಆಗಲ್ವಾ
ಚಂದ್ರ: ನಾನು ಹಗಲಲ್ಲಿ ಇರೋದಿಲ್ಲ . ಬಾನಿನಲ್ಲಿ ಚಳಿ.ಅನಿಸುವುದಿಲ್ಲ. ಇಲ್ಲಿ ಕಾಮನಬಿಲ್ಲು
- Nisha anjum
05 Aug 2023, 08:30 pm
Download App from Playstore: