ನೀನಿರಲು ನನ್ನ ಸನಿಹ
ನೀನಿರಲು ನನ್ನ ಸನಿಹ
ಇನ್ಯಾರು ಬೇಡ ನಿನ್ನ ವಿನಹ
ಒಮ್ಮೆ ನನ್ನ ಸಮೀಪಿಸಿ ನೋಡು
ನನ್ನದೆಯ ತುಂಬಾ ನಿನ್ನದೆ ಹಾಡು.....
ನಿನ್ನದು ಕೊನೆಯಿರದ ಮೌನದ ಪ್ರಲಾಪ
ಎಂದಿಗೆ ತೋರುವೆ ನಿನ್ನ ಮಾತಿನ ಸಲ್ಲಾಪ
ನಿನ್ನ ಮಾತೆ ಆಗಲಿ ನನಗೆ ಕೊನೆಯಿರದ ಆಲಾಪ
ತಿರುಗಿ ನೋಡು ಒಮ್ಮೆ ನನ್ನ ಮನಸಿನ ವಿಲಾಪ
ನೀನೆನೆ ನನ್ನ ಎಂದಿಗೂ ಮುಗಿಯದ ಪ್ರೀತಿಯ ರೂಪ....
ನೀನೆದುರು ಬಂದರೆ ಏನೊ ಪುಳಕ
ಕನಸಿನೂರಲು ನಿನ್ನ ನೋಡಲು ನಿಲ್ಲದು ತವಕ
ನೀ ನನಗೆ ಕಾಣದಿದ್ದರೆ ನಾನಗುವೆ ಭಾವುಕ
ನಿನ್ನ ಜೊತೆಯಲಿ ಕಳೆಯುವ ಘಳಿಗೆಗಳೆ ನನಗೆ ರೋಚಕ
ಏತಕೆ ನಾನೆಂದರೆ ನಿನಗೆ ಇಂತ ಕುಹಕ
ನಿನ್ನ ನಗುವೆ ನನ್ನ ಉಸಿರಾಟಕೆ ವಾಹಕ
ನಿನ್ನ ಒಲವಿನ ಹಾಡಿಗೆ ಆಗಲೇನು ವಾದಕ
ಒಪ್ಪಿ ಬಿಡಿಸು ನೀನಿರದ ನೋವು ನೀಡುವ ಬಾದಕ
ಬಂದರೆ ನೀನು ನಾನೆ ಆ ಖುಷಿಗೆ ಧನಿಕ
ನಾನು ನಿನ್ನ ಪ್ರೀತಿ ಪೂಜಿಸೊ ಆರಾಧಕ
ಇನ್ನೂ ನೋಡಬೇಡ ಒಪ್ಪಿ ಬರಲು ಜಾತಕ
- Shankru Badiger
03 Aug 2023, 10:38 pm
Download App from Playstore: