ಮಾಧ್ಯಮ- ಅಂದು ಇಂದು
ಹಿಂದೆ ಇದ್ದ
ನಾರದನೊಬ್ಬ
ಘಟನೆಯ ಸಾಕ್ಷಿದಾರ.
ವಿಸ್ತಾರವೇನು?
ವರ್ಣನೆವೇನು?
ವಿಷಯ ಏನೇ ಇರಲಿ
ಒಪ್ಪಲೇ ಬೇಕು.
ಘಟನೆಯ ಸಾಕ್ಷಿದಾರ
ಆತನೊಬ್ಬನೇ....
ಇಂದು ಹಾಗಲ್ಲ...
ಒಂದು ಘಟನೆ
ಹಲವು ಬಾಯಿಗಳು.
ಸತ್ಯ ಎಷ್ಟು?
ಸುಳ್ಳು ಎಷ್ಟು?
ತಿಳಿಯದು ನಮಗೆ.
ಆದರು ಒಪ್ಪುತ್ತೇವೆ
ತಪ್ಪಾದ ವಿಷಯ ತಿದ್ದದೆ.
ಇದ್ದ ಹಾಗೆ ಇದ್ದರೆ
ಮತ್ತೊಬ್ಬನ ಪ್ರಶ್ನೆಯಾಕೆ?
ಮಾಧ್ಯಮಗಳು
ದರ್ಪಣವಾದರೆ,
ದುರ್ಬಲರಿಗೂ
ಬಲಬಂದಂತೆ.
- vamu gavada
28 Jul 2023, 02:58 pm
Download App from Playstore: