ನನ್ನೊಲವೆ

ನಿನ್ನ ಹೆಜ್ಜೆಯ ಸದ್ದಿಗೆ,
ಬೆರಗಾದೆ ನಾನು,
ನಿನ್ನ ನವಿಲಿನ ನಾಟ್ಯಕೆ,
ನಾಚಿದೆ ನಾನು,
ನಿನ್ನ ಅಪರೂಪದ ಮಾತಿಗೆ,
ದಿಗಿಲುಗೊಂಡೆ ನಾನು,
ನಿನ್ನಲ್ಲೇ ಅವಿತುಕೊಳ್ಳಲು,
ಕಾದಿರುವೆ ನಾನು,
ನಂಗೆ ಕಾಣದೆ, ನನ್ನನ್ನೆ,
ಬಚ್ಚಿಟ್ಟುಕೊಂಡೆ ನೀನು,
ನನ್ನೊಳಗಿನ ಕನಸಿಗೆ,
ದಾರಿ ದೀಪವು ನೀನು,
ಚೆಲುವೆ ಆಗಿ ಬಂದ,
ನನ್ನ ಅಪ್ಸರೆ ನೀನು,
ನೀನು ನೋಡುವ ಕ್ಷಣ, ಮಧುರ ಮಾತು ಮೂಡುವ ಶುಭ ಗಲಿಗೆ,
ಪದೇ ಪದೇ ಬರಲಿ ರಾತ್ರಿ ಹಗಲಿನಂತೆ, ಗಗನ ಚುಕ್ಕೆಯಂತೆ,
ಬರಿ ಮಾತು, ಮನ ಸೋತು, ತಬ್ಬಿಬ್ಬಾದ ಕ್ಷಣ ಮಧುರ,
ಮಾತಿಲ್ಲ ಮೌನವೆಲ್ಲಾ, ನನ್ನ ನಿನ್ನ ಆಲಿಂಗನಾ, ನೋಡುವ ಹಕ್ಕಿಗೆ, ನಗುವಿನ ಸವಿಪಯನಾ....

ಲತೀಫ್

- Latheef Abdul

21 Jul 2023, 04:10 pm
Download App from Playstore: