ಕರುನಾಡು
ರಂಗು ರಂಗಿನ ಬೆಟ್ಟವ ತೊಟ್ಟು,
ಕಡಲ ಸೀಮೆಗೆ ತೆಂಗಿನ ಜುಟ್ಟು,
ಝೆಂಕರಿಸಿದ ದುಂಬಿಯ ನಂಟು,
ಎತ್ತರಕ್ಕೆ ಹಾರುವ ಹಕ್ಕಿಯ ಪಟ್ಟು ,
ನೋಡಿ ಬೆರಗಡಲು ಕನ್ನಡಾಂಬೆ,
ಇದು ಕರುನಾಡು, ಇದು ಕರುನಾಡು...
ಸ್ನೇಹ ಸೇತುವೆಯಾ ದಿಬ್ಬಣ ಹಾಕಿ ಸಿ,
ಮಾತು ಮಮತೆಯ ಪಾನಕ ಜೋಡಿಸಿ,
ಕಾರ್ಯ ಸಾಧನೆಯ ತೋರಣ ಕಟ್ಟಿಸಿ,
ಸದ್ಬವ, ಸಜ್ಜನಿಕೆಯ, ಮುತ್ತು ಅಂಕರಿಸಿ,
ನೋಡಿ ಬೆರಗಾದಳು ಕನ್ನಡಾಂಬೆ,
ಇದು ಕರುನಾಡು, ಇದು ಕರುನಾಡು..
- Latheef Abdul
19 Jul 2023, 12:06 pm
Download App from Playstore: