ತುಳುನಾಡು

ಹೊಂಗಿರಣ ಸೂಸಿ,
ರವಿರಾಯ ಬಾಗಿ,
ಕಡಲು ಅಲೆಯ ಚಾಚಿ,
ತೆಂಗು ಗರಿಯಾ ಬೀಸಿ,
ತುಳುನಾಡ ಸೊಬಗ ವರ್ಣಿಸಿದೆ...

ಗದ್ದೆಯ ತೆನೆಯು,
ನವಿಲಿನ ಗರಿಯು,
ಗೋವಿನ ಹಟ್ಟಿ,
ಗುಬ್ಬಚ್ಚಿಯ ಗೂಡು,
ತುಳುನಾಡ ಸೊಬಗ ವರ್ಣಿಸಿದೆ...

ನಕ್ಷತ್ರ ಹೂವು,
ಪರಿಮಳದ ಮಾವು,
ಮುಳ್ಳು ಮುಳ್ಳಿನ ಹಲಸು,
ನೆಲ್ಯಾಡಿಯ ಗೆನಸು,
ತುಳುನಾಡ ಸೊಬಗ ವರ್ಣಿಸಿದೆ...

ರಂಗಿನ ಮೀನು,
ವ್ಯಾಪಾರಿ ಮೋನು,
ಕಪ್ಪು ಬಿಳುಪಿನ ಚಿಪ್ಪು,
ಬಣ್ಣ ಬಣ್ಣದ ಸೊಪ್ಪು,
ತುಳುನಾಡ ಸೊಬಗ ವರ್ಣಿಸಿದೆ.


ಕಾರಿಂಜದ ಗುಡಿಯು,
ಚಾರ್ಮಾಡಿ ಗಡಿಯು,
ಎದೆಬಿಡದ ಮಳೆಯು,
ಗುಡ್ಡದ ಮನೆಯು,
ತುಳುನಾಡ ಸೊಬಗ ವರ್ಣಿಸಿದೆ.

ಲತೀಫ್

- Latheef Abdul

18 Jul 2023, 10:43 pm
Download App from Playstore: