ಯಾರೆಂದು
ನೀನೆ ನಿನ್ನನ್ನು ಬಣ್ಣಿಸುವೆ ಯಾಕಯ್ಯಾ?? ಅರಿತುಕೊಳ್ಳು ನೀ ತನ್ನನ್ನು ತಾನು ಬಣ್ಣಿಸುವವ ಯಾರೆಂದು....
ಒಳ್ಳೆದನ್ನು ಕಂಡರೆ ಜನರೆ ನಿನ್ನ
ವರ್ಣಿಸಲು ಮುಗಿದು ಬೀಳುವರು
ನೋಡಲ್ಲವೇ ನಿನ್ನನು ಮಂಜುನಾಥ.
ಜಾಣ ಜಾನ್ಮೇ ಕಮ್ಮಿ ಇರಬಹುದು ನಿನ್ನಲ್ಲಿ,
ನಾನು ನನ್ನದೆಂಬ ಅಹಂ ಇರಬಹುದು ನಿನ್ನಲ್ಲಿ, ಅರಿತುಕೊಳ್ಳು ಮೊದಲು ಮನುಜನಾಗಿ ಬಾಳಲು... ಕಾಣುವುದಿಲ್ಲವೇ ನಿನ್ನನು ಮಂಜುನಾಥ.
ಕಾನೂನು ರಚನೆ ಮಾಡಿದವ
ಸೋತು ಬಿಟ್ಟಾನೆ ನಿನ್ನ ಮುಂದೆ?
ಮಹಾ ಪಂಡಿತ ನೀನೆಂದು ನಿನ್ನಲ್ಲಿರಲಿ, ತೋರಿಸಬೇಡ ಪರರಿಗೆ.
ನೋಡಿ ನಗುತಿರುವನು ಮಂಜುನಾಥ.
ಉಪಕಾರ ಮಾಡು ನೀನು,
ಡಂಗುರ ಸಾರಬೇಡ ನೀನು,
ಅವರಿಗೆ ಇಷ್ಟು, ಇವರಿಗೆ ಇಷ್ಟೆಂದು,
ತಿಳಿ ನೀನು ಕೊಟ್ಟವನು ಪರಮಾತ್ಮ ಎಂದು,
ಕಾದು ಸುಮ್ಮನಿರುವನು ಮಂಜುನಾಥ.
ಬಸವಣ್ಣನ ವಚನದ ಮದ್ದು,
ಮಂಕುತಿಮ್ಮನ ಕಗ್ಗದ ಕಷಾಯ,
ಕೂಡಿ ಬಡಿದೆಚ್ಚರಿಸಲಿ
ನಿನ್ನನ್ನು ನಿಜ ದಾರಿ ಕಾಣಲು
ಮಂಜುನಾಥನ ಪಾದಕ್ಕೆ ಶರಣಾಗು ನೀನು ಒಮ್ಮೆಯಾದರು ಇಂದು.......
ಲತೀಫ್
- Latheef Abdul
18 Jul 2023, 08:10 pm
Download App from Playstore: