ಸುಂದರ

ಕನ್ನಡಕದ ಮೇಲಂಚಿನಲಿ ಕಣ್ಣ ಹಾಯಿಸಿ ನೋಡುವ ನೀನು ,ಸಂಶಯಪಡುವೆಯ ನೀನು ಇತರರಿಗೆ, ಹೊರಟು ನಿಜ ರೂಪ ನಿನ್ನದು ಏನೆಂದು ತೋರುವೆಯಾ¡ ಕಯ್ಯಲೊಂದು ಪೆನ್ನು, ತಲೆಗೆ ತಾಗಿಸುತ ಇರುವ ನೀನು, ಮೆದವಿಯೆಂದ
ತೋರುತಿಯ ಇತರರಿಗೆ,
ಬಾವಿಯೊಳಗಿನ ಕಪ್ಪೆ ಆಗಬೇಡ, ಹೊರಗೇ ನಂದು ನೋಡು ನೀನು ಸಾಕಷ್ಟೂ ಮೇಧಾವಿಗಳಿರುವರು ಸುತ್ತಮುತ್ತ.

ಬಾಯ ಬಿಚ್ಚಿ ನಗುವ ನೀನು, ಮನಸಲಿಯುವ ಯೋಜನೆ ಅದರಲಿ ಇಲ್ಲ,
ಬರಿ ಹಲ್ಲು ತೋರುತಿಯಾ ನೀನು, ಕಯ್ಯಕಟ್ಟಿ ಸೊಂತಕೆ ಇಟ್ಟು ಮಾತಾನಾಡುವ ನೀನು, ವೇದಿಕೆಯಲ್ಲಿರುವೆಯಾ, ಹೊರತು ವೇದನೆಯಲ್ಲಿರುವೆಯಾ ತಿಳಿಯಲಿಲ್ಲ ನನಗೆ,
ಕಾಲನು ಕಾಲಿಗೆ ಉಜ್ಜುತ , ಅಂಗಲಾಚಿ ಕೈ ಎತ್ತಿ ಆಗಾಗ ವೇದಿಕೆಯಲ್ಲಿ ಮಾತು ಆಡುವ ನೀನು , ಘನತೆ , ಗಾಂಭೀರ್ಯ ಇದೆಯಾ ನಿಲ್ಲಲ್ಲಿ ಎಂಬ ಸಂಶಯ ನನಗೇ

- Latheef Abdul

18 Jul 2023, 06:59 pm
Download App from Playstore: