ಬಾಳುಗಳ ಬೆಳಗಲಿ ಹೊಳೆಯಲಿ



ಆರದಿರಲಿ ಆಸಕ್ತಿಯ ಬೆಳಕು ಹೊಳೆಯಲಿ ಬೆಳಗಲಿ ಸದಾ ಹರಡುತಿರಲಿ

ಆರು ಮೂರಾದರೂ ಮೂರು ಆರಾದರೂ ಹೊಳೆಯಲಿ ಬೆಳಗಲಿ ಸದಾ ಹರಡುತಿರಲಿ

ಹೊಂಬೆಳಕ ಕಾಣುವ ಅದೆಷ್ಟೋ ಕಂಗಳು ಹಂಬಲಿಸಿ ಕರೆಯುತಿವೆ ಮನ ತುಂಬಲು

ಮುಗಿಲೆತ್ತರಕೆ ಹಾಯಲಿ ಆಸಕ್ತಿಯ ಬೆಳಕು ಬಾಳುಗಳನೇ ಬೆಳಗಲಿ ಹೊಳೆಯಲಿ ಸದಾ ಹರಡುತಿರಲಿ

ಹರಿದ ಮನಗಳನು ಮತ್ತೇ ಜೋಡಿಸುವ ಕಾಯಕವಾಗಲಿ ಬಾಳುಗಳನೇ ಬೆಳಗಲಿ ಸದಾ ಸಾಕಾರವಾಗಲಿ

_ಶಶಿಜಿತ್

- m Jithendra_ಶಶಿಜಿತ್

16 Jul 2023, 09:51 pm
Download App from Playstore: