ಅವನು

ಅವನು ಬೇಕೆಂದೂ ಹೇಳಲಾರೆ..
ಅವನು ದೂರ ಇರುವುದನ್ನೂ ಸಹಿಸಲಾರೆ..
ಅವನು ನನ್ನವನೆ, ಬರಿ ಕನಸಿನಲ್ಲಿ..
ಮನದಲ್ಲಿ ಅವನನ್ನೇ ಪೂಜಿಸಿರುವೆ..
ನಾ ಅವನಿಗೆ ಎಂದಿಗೂ ದಾಸಿಯೇ ಆಗಿರುವೆ..
ನನ್ನೆಲ್ಲಾ ಆಸೆ ಕನಸುಗಳು ಅವನೆ..
ನನ್ನೆಲ್ಲಾ ಪ್ರೀತಿಯು ಅವನಿಗಾಗಿಯೆ..
ಹೀಗಿದ್ದರೂ ಅವನು ನನ್ನವನಲ್ಲ..
ಕಾರಣ ನನ್ನ ಕೊರಳ ಮಾಂಗಲ್ಯಕೆ ಅವನ ಹೆಸರಿಲ್ಲ..

ತನುಮನಸು✍️

- Tanuja.K

12 Jul 2023, 07:49 pm
Download App from Playstore: