ಒಂದು ಓಲೆ...
ಮಂದ ಬೆಳಕಿನ ಲಾಂಧರಿನಲ್ಲಿ ಅವನು ಓದುಲು ಶುರು ಮಾಡಿದ ನಿಶಬ್ದ ರಾತ್ರಿ ಸಮಯ ಹನ್ನೆರಡರ ಆಸುಪಾಸು. ನೀಲಿ ಬಣ್ಣದ ಹಾಳೆಯೊಂದರಲ್ಲಿ ಕಪ್ಪು ಬಣ್ಣದ ಅಕ್ಷರಗಳು ಓದಲು ಶುರು ಮಾಡಿದ ನಿದ್ದೆಗೆಟ್ಟು ಓದುವಂತಹ ಮುಖ್ಯವಾದ ಪತ್ರ ಅದಾಗಿತ್ತು. ಪ್ರೀತಿಯ ಶರೀಫನಿಗೆ ನೆನ್ನೆಯ ದಿನ ಈ ಪತ್ರ ಬರೆಯಲು ಕುಳಿತಾಗ ಹಿಂದೆಂದೋ ನಾವು ನಡೆದುಬಂದ ಹಾದಿಯೊಂದು ನೆನಪಾಯಿತು ನಮ್ಮ ಹೆಜ್ಜೆ ಗುರುತುಗಳು ಇನ್ನು ಮೀನುಗುತ್ತಿದ್ದವು! ದಿಢೀರನೆ ನೀ ನನ್ನೆಡೆಗೆ ನೋಡಿ ಕೊನೆಯವರೆಗೂ ಜೊತೆಗಿರುವೆಯಲ್ಲ ಎಂದು ಕೇಳಿದ್ದೆ ಅಂದು ತಿಳಿದಿರಲಿಲ್ಲ ಈ ಪತ್ರವೇ ನನ್ನ ವಿದಾಯವೆಂದು. ಕಣ್ಣು ತುಂಬಿ ನೂರಾರು ಹನಿಗಳು ಪತ್ರಕ್ಕಂಟಿವೆ ಕ್ಷಮಿಸು ನಿನ್ನಂತೆ ರೀತಿ ರಿವಾಜುಗಳನ್ನು ಅನುಸರಿಸಿ ಬರೆಯಲಾಗಲಿಲ್ಲ ನನಗೆ. ಸಣ್ಣ ವಯಸ್ಸಿನಲ್ಲೇ ನನ್ನ ಅಮ್ಮ ದೇವರ ಪಾದ ಸೇರಿದಳು ಅಪ್ಪ ಅವಳ ನೆನಪಿನಲ್ಲೇ ಜಗವ ಮರೆತು ಮೌನಿಯಾದ ನನ್ನವರಿದ್ದು ಯಾರಿಲ್ಲದೆ ಅನಾಥೆಯಾದವಳು ನಾನು. ದೇವರು ಕೇಳದೆ ಕೊಟ್ಟ ಪ್ರೀತಿಯ ಹುಡುಗೊರೆ ನೀನು ಕಸಿಕೊಳ್ಳದಿದ್ದರೆ ಉಸಿರಾಡುತ್ತಿದೆ ನಿನ್ನ ಜೊತೆ ಆದರೆ ವಿಧಿಬರಹ ಈ ಜನ್ಮಕ್ಕಿಷ್ಟೇ ನೋಡು. ಸತ್ತ ಮನಸ್ಸಿನ ಜೊತೆಗೆ ಬದುಕುವುದಕ್ಕಿಂತ ಮನಸಿದ್ದು ಸತ್ತವರ ನೆನೆದು ಬದುಕುವುದು ಸುಲಭ ಎನಿಸುತ್ತದೆ ನನಗೆ.
ಕೊನೆಯ ವಾರ ನಮ್ಮ ನಡುವೆ ಬರಿ ಮೌನ ತುಂಬಿತ್ತು ನೋಡು ಸ್ಮಶಾನ ಮೌನವದು. ಆ ಸ್ಮಶಾನವಾಸಿಯೇ ಜಗತ್ತಿನ ನೆಮ್ಮದಿಯೆಲ್ಲಾ ಕದ್ದು ಭೂದಿಯಲ್ಲಿ ಬಚ್ಚಿಟ್ಟಿರುವನಂತೆ ಇಹದ ಎಲ್ಲಾ ಬಂಧನಗಳಿಗೂ ಸಾವು ಮುಕ್ತಿಯಲ್ಲವೇ! ಎಲ್ಲೋ ಕೇಳಿದ ಮಾತು ಜನರು ಸಾವಿಗೆ ಹೆದರುತ್ತಾರೆ ನೋವಿಗಲ್ಲ ಆದರೆ ಸತ್ತ ಬಳಿಕ ಆ ನೋವೇ ಇರುವುದಿಲ್ಲ ಎಷ್ಟು ನಿಜ ಅಲ್ಲವೇ ಬಹುಶಃ ನನ್ನ ಮನದ ನೋವಿಗೆ ಹೆದರಬೇಕಿತ್ತು ನೀನು ಲೆಕ್ಕಿಸದೆ ಹೋದೆ ಈಗ ನೋಡು ಸಾವಿಗೂ ಹೆದರಲಿಲ್ಲ ನಾನು. ನಿನ್ನುಸಿರ ಲಾಲಿಗೆ ರೆಪ್ಪೆ ಮುಚ್ಚಿದವಳು ನಾನು ಪತ್ರ ಮುಗಿಸುವ ಸಮಯವಾಯಿತು ಮತ್ತೊಮ್ಮೆ ಸಿಗುವೆ ಸಿಹಿ ನಿದುರೆಯ ಕನಸಿನಂತೆ ಮುಂದೊಂದು ಜನ್ಮವಿದ್ದರೆ ಅಲ್ಲಿಯವರೆಗೂ ಜೋಪಾನ.
ಲಾಂಧರಿನ ಬೆಳಕು ಕ್ಷಯಿಸುತ್ತಿತ್ತು ಕತ್ತಲಾವರಿಸಿ ಮೌನ ಕವಿಯಿತು....
ಅವಳ ಕೊನೆಯ ಮುತ್ತಿನ ಗುರುತು ಅವನ ಬೆರಳಿಗಂಟಿತ್ತು ಉಸಿರಿನದ್ದೂ ಕೂಡ!
- ಚುಕ್ಕಿ
08 Jul 2023, 10:33 am
Download App from Playstore: