ನೂರಾರು ರಂಗಿನ ಭಾರತ
ದೇಶದಾಗ ಆಯ್ತವ್ವ ನೂರಾರು ರಂಗು
ಜಮ್ಮು, ಕಾಶ್ಮೀರ ಚಳಿಯ ತವರೂರು
ರಾಜಸ್ಥಾನ ಬಿಸಿಲಿನ ಬೆವರೂರು
ಮೀನಿನ ರಾಜಧಾನಿ ಮಂಗಳೂರು
ಸಿಲಿಕಾನ್ ಸಿಟಿ ಬೆಂಗಳೂರು
ಕನ್ಯಾಕುಮಾರಿ ನಮ್ಮ ದೇಶದ ಕೊನೆಯ ಬಾಗಿಲು
ಕಾಶ್ಮೀರ ತಾನೇ ಮೇಲೆ ಯಾವಾಗಲೂ
ಮೆಣಸು ಅಂತ ಬಂದಾಗ ಬ್ಯಾಡಗಿನೆ ಮೊದಲು
ಆಹಾ ಆಹಾ ಜೋಗದಲ್ಲಿ ಮಳೆಗಾಲ ಬರಲು .
ತಾಜ್ ಮಹಲ್ ಆಯ್ತವ್ವ ಸುಂದರ ನೋಡ
ಕನಕಪ್ಪ ಹುಟ್ಟಿದ ಗ್ರಾಮ ಬಾಡ
ಅದು ನೋಡಕೇರಳ ಇದರ ಜಾರ್ಖಂಡ
ಸಿಂಹದ ಮರಿಗಳ ಪಂಜಾಬ್ ಹಿಂಡ
ಇಟ್ಟಾಗ ಗುಜರಾತ ಅತ್ತಾಗ ಸಿಕ್ಕಿಮ್
ಇದ ಭರತನಾಟ್ಯ ತಕಧಿಮ್ ತಕದಿಂ
ಏನಣ್ಣ ಅನ್ನೋ ಆಂಧ್ರ ನೋಡ
ರಜನಿಕಾಂತರ ತಮಿಳನಾಡ
ಅರಿಶಿಣ ಕುಂಕುಮ ಕನ್ನಡ ನಾಡು
ಹಿಂದಿ ರಾಷ್ಟ್ರ ಮಹಾರಾಷ್ಟ್ರ ನೋಡು
ಅಲ್ ನೋಡು ಗುರುದ್ವಾರ ಕೈಮುಗಿದು ಬೇಡು
ಅದು ನೋಡು ಮಂದಿರ ಭಜನೆ ಹಾಡು
ಮುಸ್ಲಿಮ ಹಿಂದು ಈಸಾಯಿ ಎಂದು
ಅಣ್ಣ ತಮ್ಮಂದಿರು ಸಾರೋಣ ಎಂದೂ
ಕಾಮನಬಿಲ್ಲಾಗ ಐತಿ ಏಳೇ ರಂಗು
ದೇಶದಾಗ ಆಯ್ತಾ ನೂರಾರು ರಂಗು
- Nisha anjum
07 Jul 2023, 11:08 am
Download App from Playstore: