ಮಳೆಯ ಗೆಲುವು
ಹಾ ನಿಜ ನಾನು ಸೋತೆ
ಮಹಡಿಯಲ್ಲಿ ನಿಂತು ನಾ ನೋಡಿದೆ
ಸ್ವರ್ಗವೇ ಹನಿ ಹನಿಯಾಗಿ ಇಳಿಯುತಿದೆ
ಮೈ ಚೂರೇ ಚಳಿಗೆ ಜುಮ್ಮೆಂದಿದೆ
ಈ ದೃಶ್ಯ ಕೆ ನಿಜ ನಾನೇ ಸೋತೆ ಬಿಟ್ಟೆ
ಹೆಜ್ಜೆ ಹೆಜ್ಜೆಗೂ ಪುಟ್ಟ ಪುಟ್ಟ ಹನಿಯ ಹನಿಯುತ್ತಿದೆ
ಜೋರೇನಲ್ಲ ಚಿಟಿಜಿಟಿಯಾಗಿ ಬಿಳುತ್ತಿದೆ
ಅರೆರೆ ಇದೇನು ಮುಖಕ್ಕೆ ಕೈ ಹಿಡಿದು ನಾನು ಕೂತು ಬಿಟ್ಟೆ
ಈ ದೃಶ್ಯಕ್ಕೆ ನಿಜ ನಾನೇ ಸೋತೆ ಬಿಟ್ಟೆ
ಲೇಖನಿಯು ಸೋತಿದೆ ವರ್ಣಿಸಲಾಗದೆ
ಇನ್ನು ನನಗಿಲ್ಲಿ ಗತಿ ನಾನು ನೆನೆಯುತ್ತಾ ಕುಳಿತುಬಿಟ್ಟೆ
ಮೇಘ ಸಂಘರ್ಷದಿ ಉಂಟಾದ ಮಳೆ ಚಿಪ್ಪಿನಲ್ಲಿ ಸಿಗದಒಂದು ರೀತಿಯಮುತ್ತೆ
ನಿನ್ನಬರೆಯಲು ಆಗದೆಸುಮ್ಮನಿರಲು ಆಗದೇ
ಕವಿತೆಸೋತು ಬಿಟ್ಟೆ
ನೂರಾರು ಕವಿಗಳಮರಳು ಮಾಡಿದನಿಸರ್ಗ
ನೀ ನಕ್ಕರೆ ಈಭೂಮಿಗೆ ಸ್ವರ್ಗ
ನಿನ್ನಲ್ಲಿ ಪಡೆಯಿತು ಸಂತೃಪ್ತಿ ಆತ್ಮ ನಿನ್ನಾ ಯೋಚಿಸುತ್ತಾ ಆದೆ ಆಧ್ಯಾತ್ಮ
ಸರಳ ಸೌಂದರ್ಯ ಅಡಗಿದ ಅಂದ
ದೃಷ್ಟಿ ತೆಗೆಯುವೆ ಕಳ್ಳ ಬಂದ
ತರ್ಕದಿ ಗೆಲುವು ಅರಸುತ್ತಿದ್ದ ನಾನು
ನಿನ್ನ ತಂಗಾಳಿ ಆಗಮನದಿ ಯಾಕೋ ಸೋತು ಬಿಟ್ಟೆ
Nisha Anium
- Nisha anjum
07 Jul 2023, 10:59 am
Download App from Playstore: