ಗುರು ಪೂರ್ಣಿಮೆ ದಿನದ ಶುಭಾಶಯಗಳು
ನನಗೆ ವಿದ್ಯೆ ಕಲಿಸಿಕೊಟ್ಟ ಎಲ್ಲಾ ಗುರುಗಳಿಗೆ ಹೃದಯ ಪೂರ್ವಕವಾಗಿ
ನಮಸ್ಕಾರಗಳು
ಗುರುವಿನ ಗುಲಾಮನಾಗು
ಗುರುವೆ ನಿನ್ನ ಕರುಣೆಯಿಂದ
ಪುನೀತನಾದೆ ನಾನು
ನಿಮ್ಮ ಜ್ಞಾನದಿಂದ ನನಗೆ
ಜ್ಞಾನ ಜ್ಯೋತಿ ಫಲಿಸಿತು
ಅಜ್ಞಾನವೆಂಬ ಕತ್ತಲಿಂದ
ಸುಜ್ಞಾನಿಯನ್ನಾಗಿ ಮಾಡಿದೆ
ಲೋಕದಲ್ಲಿ ಕಣ್ಣು ತೆರೆಸಿ
ನೀತಿವಂತನಾಗಿಸಿದೆ
ಅನ್ಯಾಯವೆಂಬ ಕಲ್ಲು ಮುಳ್ಳು ತೆಗೆಸಿ
ಸತ್ಯವೆಂಬ ಹುಲ್ಲು ಹಸಿರ ಶಾಂತಿ ಬೆಳಸಿ
ನಿತ್ಯ ಜ್ಞಾನಿಯಾಗಿ ಗುರುವ ಸೇವೆ ನಾ ಮಾಡುವೆ
ಉತ್ತಮನಾಗಬೇಕೆಂಬ ಸತ್ಯ ನುಡಿಯ ತಿಳಿಸುವೆ
ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ
- Gtramachandrappa Ramachandrappa
03 Jul 2023, 02:29 pm
Download App from Playstore: