ಕವನದ ಶೀರ್ಷಿಕೆ ಬಹುಮುಖ ಪ್ರತಿಭೆ ಹೆಲನ್.
ಪತ್ರಕರ್ತ ಆರ್ಥರ್ ಹೆಚ್. ಕೆಲ್ಲರ್ ರವರ ಮಗಳಾದ ಹೆಲನ್,
ಅಸುಳೆಯಲ್ಲೆ ಮಿಂಚಿನ ವೇಗವನ್ನು ಗ್ರಹಿಸುವಷ್ಟು ಚುರುಕಾಗಿದ್ದಳು.
18 ತಿಂಗಳ ಮಗುವಿಗೆ ಅಂಟಿದ ಸ್ಕಾರ್ಲೆಟ್ ಫೀವರ್,
ಬಹುವಿಕಲತೆ ವರ ನೀಡಿ ನಿಶಬ್ದಗೊಳಿಸಿತು ಹೆಲನ್ ಬಾಲ್ಯವ.
ದೃಷ್ಟಿ ಇರದ ಕಣ್ಣು, ಆಲಿಸುವ ಶ್ರವಣ ಸ್ತಬ್ಧವಾದಾಗ, ಅವರಲ್ಲಿ ಆವರಿಸಿತು ಮಾತಿಲ್ಲದ ಮೌನ.
ಮುದುಡಿದ ಮೊಗ್ಗನು ಅರಳಿಸುವ ಕನಸೋತ್ತ ಹೆಲನ್ ತಾಯಿ,
ಪರ್ಕಿಂಸ್ ಶಾಲೆಗೆ ಧಾವಿಸಿದರು,
ಅಲ್ಲಿ ಗ್ರಹಂಬೆಲ್ ಶಿಷ್ಯೆ ಅನಿಸಲವನ್, ಹೆಲಂಗೆ ಗುರುವಾಗಿ ಸಿಕ್ಕರು.
ಹೆಲನ್ಗೆ ಸನ್ನಿವೇಶದ ಪರಿಕಲ್ಪನೆಯ ಪಾಠವ,
ಸಿಲೆವನ್ ಸ್ಪರ್ಶಆಕ್ಷರಗಳ ಮೂಲಕ ಆರಂಭಿಸಿದರು.
ಒಮ್ಮೆ ವಾಟರ್ ಮಗ್ ಶಬ್ದಗಳ ತಪ್ಪಾಗಿ ಗ್ರಹಿಸಿದ ಹೆಲನ್ ಕೋಪಕ್ಕೆ ಗೊಂಬೆ ಚೂರಾಯಿತು,
ಸೆಲವನ್ ಕೈ ಮೇಲೇ ಹರಿಸಿದ ಕೊಳವೆ ಬಾವಿಯ ನೀರಿನ ಅನುಭವ,
ಮಗುವಿನ ಕುತೂಹಲ ಕಲಿಕೆಗೆ ಮಾರ್ಗವಾಯಿತು.
ಸೆಲವನ್ ಜೊತೆ ವಿಶ್ವವ ದರ್ಶಿಸಿದ ಹಿಲ್ಲನ್,
ಲೈಟ್ ಇನ್ ಮೈ ಡಾರ್ಕ್ನೆಸ್ ನಂತಹ 12 ಕೃತಿಗಳಿಗೆ ಒಡತಿಯಾದರೂ.
ಉತ್ತುಂಗಕ್ಕೆರಿದ ಬಹುಮುಖ ಪ್ರತಿಭೆ ಹೆಲನ್,
ಸಾಧನೆಗೈದ ಶ್ರೇಷ್ಠ ಮಹಿಳೆಯರ ಸಾಲಿನಲ್ಲಿ ಅಜರಾಮರ.
ಕಲಾ ಸರಸ್ವತಿಯಾಗಿ ಮೆರೆದ ಹೆಲನ್,
ನ್ಯೂನ್ಯತೆ ಉಳ್ಳ ಮಹಿಳೆಯರ ಹಕ್ಕುಗಳಿಗಾಗಿಯೂ ಹೋರಾಡಿದರು.
ಅಮೇರಿಕಾದ ಮಗಳಾಗಿ ಹುಟ್ಟಿದ ಹೆಲನ್,
ಸಮಾಜ ಸುಧಾರಕಿಯಾಗಿ ಜಗ ಬೆಳಗುವ ಸೂರ್ಯನಂತೆ ನಮ್ಮೊಳಗೆ ಇಂದಿಗೂ ನೆಲೆಸಿರುವರು.
- nagamani Kanaka
27 Jun 2023, 10:39 pm
Download App from Playstore: