ಎಷ್ಟೊಲ್ಲೇ feel ಅಲ್ವಾ ಒಲವು!
ನಾವು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋವ್ರನ್ನ ನೆನ್ಸ್ಕೊಂಡಗ ಹೃದಯ ಬೆಚ್ಚಗಾಗುತ್ತೆ ಒಂದು ಕ್ಷಣ. ತೀರದ ಅಲೆಗಳಿಗೆ ಸಮುದ್ರದ ಪರಿಚಯ ಮಾಡುವ ತಂಗಾಳಿ ಪ್ರೀತಿ, ತಂಪೆರೆದು ಇಂಪಾಗಿ ಹರೆಯಕ್ಕೆ ಹೊಕ್ಕಿ ಸೊಂಪೆನಿಸುವ ಸೊಜುಗಾತಿ ಪ್ರೀತಿ.
ನಲಿವಿದ್ದಷ್ಟೇ ನೋವು ಇರುತ್ತೆ ಇಲ್ಲಿ ದೂರವೆನಿಸಿದಷ್ಟೇ ಸನಿಹ ಈ ಪ್ರೀತಿ. ಅವನ ಹೆಸರಲ್ಲಿ ಅವಳಿಟ್ಟ ಸಿಂಧೂರದಷ್ಟೆ ಚಂದ ಪ್ರೀತಿ, ಅವಳ ನೆನೆದಾಗ ಅವನ ಉಸಿರಲ್ಲಿ ನೆಮ್ಮದಿಯ ಭಾವ ಈ ಪ್ರೀತಿ. ಹೇಳುತ್ತಾ ಹೋದರೆ ಮೌನವೂ ಮಾತಾಗುವ ಸಂಕೋಲೆ ಈ ಪ್ರೀತಿ ಮಾತೇ ಬೇಡವಾಗಿ ಮೌನದಲ್ಲಿ ಧ್ಯಾನಿಸುವ ದೈವ ಈ ಪ್ರೀತಿ. ಇಬ್ಬನಿಗಿಂತ ಮೃದುವಾದ ಹೃದಯದಲ್ಲಿ ಕಂಬನಿಯ ಕಟ್ಟಲೆ ಈ ಪ್ರೀತಿ. ಕರಕುಶಲ ಕಸೂತಿಗಾರನು ಎಣೆದೆನೆದು ಬೆಸೆದಿರಬೇಕು ಹೃಯದಗಳ ಸಂಬಂಧವನ್ನು ಪ್ರೀತಿ ಎಂಬ ಹೆಸರಿಟ್ಟು ತಿಳಿದವರಿಗದು ಅಮೃತ ಊಹಿಸಿಕೊಂಡವರಿಗಿದು ಕಲ್ಪನೆ ಅರ್ಥವಾಗದವರಿಗಿದು ವಿಷ ಮತ್ತು ಪ್ರೀತಿಸಿಕೊಂಡವರಿಗಿದು ಸರ್ವಸ್ವ.
ಪ್ರೀತಿಸಿಕೊಂಡಮೇಲೆ ಆಯ್ಕೆಗಳಿರಬಾರದು ಎಂದು ಸ್ನೇಹಿತರು ಒಬ್ಬರು ಹೇಳಿದ ನೆನಪು ಅದು ಸರಿ ಎನಿಸುತ್ತದೆ ನನಗೆ. ಪ್ರೀತಿ
ಎಷ್ಟೊಲ್ಲೇ feel ಅಲ್ವಾ ಪ್ರೀತಿ.
ನಾವು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋವ್ರನ್ನ ನೆನ್ಸ್ಕೊಂಡಗ ಹೃದಯ ಬೆಚ್ಚಗಾಗುತ್ತೆ ಒಂದು ಕ್ಷಣ. ತೀರದ ಅಲೆಗಳಿಗೆ ಸಮುದ್ರದ ಪರಿಚಯ ಮಾಡುವ ತಂಗಾಳಿ ಪ್ರೀತಿ, ತಂಪೆರೆದು ಇಂಪಾಗಿ ಹರೆಯಕ್ಕೆ ಹೊಕ್ಕಿ ಸೊಂಪೆನಿಸುವ ಸೊಜುಗಾತಿ ಪ್ರೀತಿ.
ನಲಿವಿದ್ದಷ್ಟೇ ನೋವು ಇರುತ್ತೆ ಇಲ್ಲಿ ದೂರವೆನಿಸಿದಷ್ಟೇ ಸನಿಹ ಈ ಪ್ರೀತಿ. ಅವನ ಹೆಸರಲ್ಲಿ ಅವಳಿಟ್ಟ ಸಿಂಧೂರದಷ್ಟೆ ಚಂದ ಪ್ರೀತಿ, ಅವಳ ನೆನೆದಾಗ ಅವನ ಉಸಿರಲ್ಲಿ ನೆಮ್ಮದಿಯ ಭಾವ ಈ ಪ್ರೀತಿ. ಹೇಳುತ್ತಾ ಹೋದರೆ ಮೌನವೂ ಮಾತಾಗುವ ಸಂಕೋಲೆ ಈ ಪ್ರೀತಿ ಮಾತೇ ಬೇಡವಾಗಿ ಮೌನದಲ್ಲಿ ಧ್ಯಾನಿಸುವ ದೈವ ಈ ಪ್ರೀತಿ. ಇಬ್ಬನಿಗಿಂತ ಮೃದುವಾದ ಹೃದಯದಲ್ಲಿ ಕಂಬನಿಯ ಕಟ್ಟಲೆ ಈ ಪ್ರೀತಿ. ಕರಕುಶಲ ಕಸೂತಿಗಾರನು ಎಣೆದೆನೆದು ಬೆಸೆದಿರಬೇಕು ಹೃಯದಗಳ ಸಂಬಂಧವನ್ನು ಪ್ರೀತಿ ಎಂಬ ಹೆಸರಿಟ್ಟು ತಿಳಿದವರಿಗದು ಅಮೃತ ಊಹಿಸಿಕೊಂಡವರಿಗಿದು ಕಲ್ಪನೆ ಅರ್ಥವಾಗದವರಿಗಿದು ವಿಷ ಮತ್ತು ಪ್ರೀತಿಸಿಕೊಂಡವರಿಗಿದು ಸರ್ವಸ್ವ.
ಪ್ರೀತಿಸಿಕೊಂಡಮೇಲೆ ಆಯ್ಕೆಗಳಿರಬಾರದು ಎಂದು ಸ್ನೇಹಿತರು ಒಬ್ಬರು ಹೇಳಿದ ನೆನಪು ಅದು ಸರಿ ಎನಿಸುತ್ತದೆ ನನಗೆ. ಒಮ್ಮೊಮ್ಮೆ ಲೋಕರೂಢಿಗೆ ತಲೆಯೊಡ್ಡಿ ಹೃದಯಗಳು ಗಾಸಿಗೊಂಡಾಗ ಪ್ರೀತಿಯೇ ಅಲ್ಲವೆ ಮತ್ತೆ ಬೆಸೆಯೋದು. ಕೆಲವು ವಿದಾಯಗಳು ಖಾತ್ರಿಯಾಗಿರಬೇಕು ಕೆಲವು ಭೇಟಿಗಳು ಖಾತ್ರಿಯಾಗಿರಬೇಕು ಮತ್ತೆ ಸಿಕ್ಕಾಗ ತಪ್ಪುಗಳೆಲ್ಲವ ತಿದ್ದಿಕೊಂಡು, ನೋವು ನಲಿವುಗಳ ಹಂಚಿಕೊಂಡು, ನಾನು ನನ್ನದೆನ್ನುವುದ ಬಿಟ್ಟು ನಮ್ಮದೆನ್ನುವ ಭಾವದಲ್ಲಿ ಕೂಡಿ ಬಾಳಿದರೆ ಅವರಿಬ್ಬರ ನಡುವೆ ಪ್ರೀತಿ ಉಸಿರಾಡುತ್ತಾದೆ ಮತ್ತೆ ಜೀವ ಪಡೆಯುತ್ತದೆ.
- ಚುಕ್ಕಿ
27 Jun 2023, 11:35 am
Download App from Playstore: