ಅಮ್ಮ

ನಿನ್ನವರು ನನ್ನವರು ಆದವರು ಆಗದವರು ಯಾರ್ಯಾರಿದ್ದರಲ್ಲಿ ನೆತ್ತರ ಮಡಿಲಲ್ಲಿ ಕಣ್ಣೀರ ಸುರಿಸುತ್ತಾ ರಾತ್ರಿಗಳ ಕಳೆದಾಗ! ಮುಂಜಾವುಗಳಲ್ಲಿ ಅಸ್ತಿತ್ವ ಅರಿಯದೆ ಒಂಟಿತನ ಬೆನ್ನಟ್ಟಿ ಕಾಡಿದಾಗ!

ನೋವಲಿಲ್ಲದ ಪ್ರೀತಿ ನಲಿವಿಗೇತಕೆ?
ಬಂಧುಗಳೆತಕೆ, ಬಾಂಧವ್ಯಗಳೆತಕ್ಕೆ?
ಕಂಗೆಟ್ಟು ಕಾದರೂನು ಕಿಂಚಿತ್ತೂ ಅಲುಗಾಡಲಿಲ್ಲ ಹೊಟ್ಟೆಯಲ್ಲಿ ಆ ಭ್ರೂಣ!

ಎಷ್ಟು ವಸಂತಗಳ ಕನಸುಗಳಲ್ಲಿ ರೂಪ
ಪಡೆದಿತ್ತೋ ಅದು ಇಂದು ಛಿದ್ರವಾದಂತಿದೆ!
ಕಾಣದ ಪ್ರಪಂಚದ ಸ್ವಾರ್ಥಕ್ಕೆ ಬಲಿಯಾಯಿತೋ! ಅಥವಾ
ಇರಬಹುದೇನೋ ಅಲ್ಲೊಂದು ತುಣುಕು
ಅಮ್ಮ ಎಂದು ಕರೆಯಲಿಂದು.

ಇರಬಹುದೇನೋ ಅಲ್ಲೊಂದು ತುಣುಕು ಅಮ್ಮ ಎಂದು ಕರೆಯಲಿಂದು...

- ಚುಕ್ಕಿ

26 Jun 2023, 09:59 am
Download App from Playstore: