ಕವನದ ಶೀರ್ಷಿಕೆ ಅಷ್ಟೇ ಯೋಗ.

ನಮ್ಮ ನರಗಳ ಹುಣ್ಣಾದದಿ ನುಡಿಯುವ ಯೋಗ ಮಂತ್ರದ ಪ್ರಥಮ ಶಬ್ದ ಓಂಕಾರಾ.
ಹರಡಿದ ಭಾಗಗಳ ಒಗ್ಗೂಡಿಸಿ ರಚಿಸಿದರು ಪತಂಜಲಿ ಅಷ್ಟ ಯೋಗ.
ಸಾಧು ಸಂತರ ಅರಿವಿನ ತೀಕ್ಷ್ಣತೆಯ ಹೆಚ್ಚಿಸಿದೆ ಧ್ಯಾನ ಮಾರ್ಗ.
ನಮ್ಮ ದೇಹ ಮನಸ್ಸುಗಳ ಸಂಯೋಜಿಸೋ ಕರ್ಮ ಯೋಗ,
ಆಸನಗಳ ಮೂಲಕ ಪೋಷಿಸುವುದು ಉತ್ತಮ ಆರೋಗ್ಯ.
ಪೌಷ್ಟಿಕ ಆಹಾರ ದೇಹದ ಸದೃಢತೆಗೆ ಸಂಜೀವಿನಿ ಆದರೆ,
ಯೋಗ ನಮಗೆ ಕ್ರಮಬದ್ಧ ಜೀವನಶೈಲಿಯನ್ನು ಕಲಿಸುತ್ತದೆ.
ರೋಗದ ಕಿಡಿಗಳ ದೂಡಿ,, ನಮ್ಮ ಚೆಲುವಿಗೆ ಹೊಂಬೆಳಕ್ಕಾಗಿರೋ ಯೋಗಭ್ಯಾಸ,
ಆಸೆಗಳ ನಿಯಂತ್ರಿಸಿ, ನಮಗೆ ಸಕಲ ತ್ಯಾಗದ ಶ್ರೇಷ್ಠತೆಯ ಬೋಧಿಸುವ ಹವ್ಯಾಸ.
ಹಂಸ ನಡೆಯೊಳ್ ಬೆರಗುಗೊಳಿಸಿದೆ ಜಗದ ಜನರ ನಮ್ಮ ಭಾರತೀಯ ಯೋಗ,
ಏಕಾಗ್ರತೆ ಸಾಧಿಸಲು ನೆರವಾಗಿದೆ ನಮಗೆ ಬ್ರಾಹ್ಮಿ ಯೋಗ.
ಚಲಿಸೋ ರಕ್ತದ ಸಮಸ್ಥಿತಿ ನಮ್ಮ ಪ್ರಾಣಯಾಮದಿಂದ,
ಜನಜೀವನ ಮೌಲ್ಯದ ದರ್ಶನ ದೊರೆಯುವುದು ಪಥಂಜಲಿ ಯೋಗ ಶಾಸ್ತ್ರದಿಂದ.

- nagamani Kanaka

21 Jun 2023, 09:21 pm
Download App from Playstore: