ಬೇಡವಾಗಿರುವೆ ನಿನಗೆ ನಾನು..

ಬಣ್ಣ ಬಣ್ಣದ ಕನಸು ಕಟ್ಟಿದ್ದೆ ನಾನು..
ಬಣ್ಣವ ಅಳಿಸಿ ಬರಿ ಚಿತ್ತಾರ ಉಳಿಸಿದೆ ನೀನು...
ನಿನ್ನನಪ್ಪಿ ಮಳೆಯಲಿ
ನೆನೆಯುವ ಆಸೆ ಅಂದು..
ಮಳೆಯೂ ನಾಚುವಂತೆ
ಕಣ್ಣೀರ ಕಡಲಲೇ ಮುಳುಗಿರುವೆ ಇಂದು..
ಕಿರು ಬೆರಳು ಹಿಡಿದು ನಡೆಯಬೇಕು
ನಿನ್ನೊಂದಿಗೆ ಬಹುದೂರ
ಒಂದು ಹೆಜ್ಜೆಯೂ ಜೊತೆಗಿಡದೆ
ನೀ ನನ್ನ ದೂಡಿದೆ, ಈ ನೋವೆ ಅಪಾರ...
ಬೇಕಾಗಿರುವೆ ನನಗೆ ನೀನು..
ಬೇಡವಾಗಿರುವೆ ನಿನಗೆ ನಾನು..

ತನುಮನಸು✍️

- Tanuja.K

18 Jun 2023, 09:55 pm
Download App from Playstore: