ಓ... ಒಲವೇ
ಕನಸಲು ನಿನ್ನನೇ
ಪ್ರತಿದಿನ ಜಪಿಸುವೆ
ಬಂದು ಬಿಡು ನೀ ನಿಜವಾಗಿ
ಯಾರನೆ ಕಂಡರು
ನಿನ್ನದೇ ನೆನಪು
ಬರುವುದು ಮನಕೆ ಸಿಹಿಯಾಗಿ
ಈ ಸುಂದರ ಪ್ರೀತಿಯಲಿ
ನನ್ನ ಪ್ರೇಮಿಯೂ ನೀನಾದೆ
ನನ್ನ ಒಲವ ನಿನಗೆ ಬಡಿಸಲೆ
ಈ ಕ್ಷಣದಲೆ.....
ಒಂದು ಕ್ಷಣಕೂ ಮರೆಯಾಗದಿರು ನೀನು
ನೀನೇ ನನ್ನ ಸ್ವಾತಿಮುತ್ತು
ಹೃದಯದೊಳಗೆ ನನ್ನ ಬಚ್ಚಿಟ್ಟುಕೊ ಒಮ್ಮೆ ಸಾಕು
ಒಂದು ಸುಂದರ
ಮೀನು ನೀನು
ನಾ ಅದಕೆ ಕಡಲಾಗಿ ನೀರುಣಿಸಿ
ಜೀವ ತುಂಬಲೇನು?
ಓ ನನ್ನ ಜೀವವೇ
ನೀ ಹೇಳಿಬಿಡು ನಿನಗೂ
ನಾನು ಇಷ್ಟವೇ?
ಇಷ್ಟವಾದರೆ ಹೃದಯದಲ್ಲಿ
ಇಟ್ಟು ಕೊಂಡು ನಾ ಕಾಯುವೆ
ನನ್ನ ಉಸಿರಲ್ಲಿ ಉಸಿರಾಗಿ
ಹೋಗಿರುವೆ ನೀನು
ನಿನಗಾಗಿಯೆ ಮೀಸಲು
ನನ್ನುಸಿರಿನ ಪ್ರತಿ ಬಡಿತವು
ಸಿಂಧು ಜಯಂತ್ k✍️
- Sindhu jayanth k
11 Jun 2023, 10:37 pm
Download App from Playstore: