ಯಾರು ಮೇಲು ಯಾರು ಕೀಳು......ಸುಧಾ ಆರ್ ಬಳಿಗೇರ್

ಕಣ್ಣು ಕನಸಿಗೊಂದು ಮಾತು ಕೇಳುತ್ತಿದೆ ....
ನಾನು ನನ್ನ ಕಣ್ಣು ಮುಚ್ಚಿದರೆ ಮಾತ್ರ ನೀನು ಕಾಣುವೆ ....

ಕನಸು ಕಣ್ಣಿಗೆ ಹೇಳಿತು ....ನೀನಾಗಿಯೇ ಕಣ್ಣು ಮುಚ್ಚುವ ಅವಶ್ಯಕತೇ ಇಲ್ಲ
ಯಲ್ಲ ನನ್ನ ನೋಡುವುದಕ್ಕಾಗಿಯೇ ಸ್ವತಃ ತಾವೇ ಕಣ್ಣು ಮುಚ್ಚುವರು ....

ಯಾರು ಮೇಲು ಯಾರು ಕೀಳು....

ಚಿಂತೆಯು ಹೇಳುತ್ತಿದೆ ಚಿತೆಗೆ ನೀನು ಎಷ್ಟು ಕ್ರೂರಿ ದೇಹವನ್ನ ಹೇಗೆ ಸುಡುತ್ತಿರುವೆ....

ಚಿತೆಯು ಹೀಗೆ ಹೇಳಿತು ....ಬದುಕಿರುವಾಗ ನೀನು ಈ ದೇಹಕ್ಕೆ ನೇಮದಿಯೇ ಸಿಗದ ಹಾಗೆ ಮಾಡಿ ಪ್ರತಿ ದಿನವೂ ಒಂದೊಂದು ಚಿಂತೆಗಳನ್ನು ಕೊಟ್ಟುಸುಟ್ಟಿರುವೆ ...ನಾನಾದರೂ ಒಂದೇ ಬಾರಿ ಸುಟ್ಟು ಈ ದೇಹಕ್ಕೆ ಶಾಂತಿ ತಂದಿರುವೆ ಎಂದು....

ಯಾರು ಮೇಲು ಯಾರು ಕೀಳು....

ಸುಧಾ ಆರ್ ಬಳಿಗೇರ್.....





- ಸುಧಾ ಆರ್ ಬಳಿಗೇರ

09 Jun 2023, 01:42 pm
Download App from Playstore: