ದೂರ ತೀರ ಪಯಣ

ದೂರ ತೀರ ಪಯಣದಿ ಸಾಗಿ ಬಂದಿರಿ ಅನುಕ್ಷಣದಿ

ಹೊಸದಾರಿ ಹೊಸರೀತಿ ಹೊಸಸೊಬಗುಗಳ
ಮಿಲನದ ಕಂಪು, ಹೊಸಕ್ಷಣಗಳ ಸೊಂಪು ಇರಲಿಯೆಂದೆಂದೂ

ಸಿರಿನಾಥ ಪ್ರಭುನಾಥ ವರನಾಥ ಗುಣನಾಥ
ಗುರುನಾಥ ನೀನೆ ಕಾಯೋ ಎನ್ನವರ ದೇವನೆಂದೆಂದೂ

ಪೂರ್ಣ ರೂಪದೊಳು ಪೂರ್ಣ ವರವಾಗಿ ಬರುವೆ ನೀ ಎಂದೆಂದೂ
ಪೂರ್ಣಗುಣದೊಳು ಪೂರ್ಣಿಮಚಂದಿರನಂತೆ ತೋರುತ ನಿಲ್ಲುವೆ ನೀ ಎಂದೆಂದೂ

ರಜತ ವರುಷದ ಹರುಷದ ವಿವಾಹ ಮಹೋತ್ಸವದ ಈ ದಿನಕೆ
ಅಜ ಹರಿ ಹರರ ಆಶೀರ್ವಾದಗಳು ಸದಾ ಇರಲಿ ನಿಮ್ಮ ವರ ಬಾಳಿಗೆ

_ಶಶಿಜಿತ್

- m Jithendra_ಶಶಿಜಿತ್

09 Jun 2023, 06:41 am
Download App from Playstore: