ಕನಸನು ಕಾಣುತಲಿರುವೆ

ಕಾಯುತಲಿರುವೆ ಕಾತರದಲಿ ಕರುಣೆಯಿರಲಿ ಕನ್ನಿಕೆ
ಕಾಣುತಲಿರುವೆ ಬರಿದೆ ಪರದೆ ಬಾಳಲಿ ಬರದೇ ನಿನ್ನ ಚೆಲ್ವಿಕೆ

ಹೆಣೆಯುತಿರುವೆ ದಿನಗಳನು ನವಿರಾಗಲು ಕನಸನು
ಹಣತೆಯಲಿರುವ ಎಣ್ಣೆಯಂತೆ ಮುಡಿಪಾಗಿಸಲು ಮನಸನು

ಕುಡಿನೋಟದ ಬೆಳದಿಂಗಳ ಮಂದ ಬೆಳಕ ನೀ ನೀಡೆಯಾ
ಎನಗಿಂತ ಸಲುಗೆಯ ಗೆಳೆಯ ಸಿಗಲಾರ ನೀ ನೋಡೆಯಾ

_ಶಶಿಜಿತ್

- m Jithendra_ಶಶಿಜಿತ್

06 Jun 2023, 01:06 am
Download App from Playstore: