ಕವನದ ಶೀರ್ಷಿಕೆ ಪರಿಸರ ರಕ್ಷಣೆ.
ಜೀವಕುಲಕೆ ಪರಿಸರವೇ ಆಶ್ರಯದ ತಾಣ,
ಬುದ್ಧಿವಂತ ಮನುಜರೇ ಕಡಿಯದಿರಿ ಕಾಡನ್ನ.
ಶುಭೋದಯದಿ ಕೇಳಬೇಕು ಹಕ್ಕಿಗಳ ಚಿಲಿಪಿಲಿಯ ಪಠಣ,
ನಿರ್ಮಿಸದೆ ನೆಟ್ವರ್ಕ್ ಟವರನ್ನ ಉಳಿಸಿರಿ ಪಕ್ಷಿಗಳ ಪ್ರಾಣ.
ನೆಲವ ತಂಪಿಸೋ ಮಳೆಗೆ ಹಸಿರೆಂದಿಗೂ ಉಸಿರು,
ಪ್ರಕೃತಿಯೇ ನಶಿಸಿದರೆ ಅಳಿಸಲಾಗದು ಹೆಚ್ಚುವ ತಾಪಮಾನದ ಹೆಸರು.
ಬೆಳೆ ಕುಡಿಯದಿರಲಿ ಕಲುಷಿತ ನೀರನ್ನ,
ನಮ್ಮ ಸ್ವಾಸ ಸೇವಿಸದಿರಲಿ ವಿಷಭರಿತ ಹೊಗೆಯನ್ನ.
ಭುವಿಯು ಬಿರಿಯದಿರಲಿ ಹೃದಯ ಸೀಳುವ ಅಣುಶಕ್ತಿ ಬಾಂಬಿಗೆ,
ತುತ್ತಾಗದಿರಲಿ ಸೃಷ್ಟಿಯ ವಿಕೋಪಕ್ಕೆ ಜೀವಿಗಳ ಕುತ್ತಿಗೆ.
ಊರತ್ತ ಮುಖ ಮಾಡದಂತೆ ಉಳಿಸಿರಿ ಮೃಗಗಳ ನೆಲೆಯನ್ನ,
ನಮ್ಮ ಸಮೃದ್ಧ ಜೀವನಕ್ಕೆ ರಕ್ಷಿಸುವ ಬನ್ನಿ ತಾಯಮಡಿಲನ್ನ.
ತ್ಯಜಿಸಿರಿ ರೋಗ ತರುವ ಪ್ಲಾಸ್ಟಿಕ್ ಬಳಕೆಯನ್ನ,
ಪಣ ತೊಟ್ಟು ಸಾಕಿರಿ ನಮಗೆ ಆಮ್ಲ ಕೊಡುವ ಪುಟ್ಟ ಸಸಿಯನ್ನ.
- nagamani Kanaka
05 Jun 2023, 09:57 pm
Download App from Playstore: