ಜೀವನದಿ ಅಳಿಯದ ಬಣ್ಣಗಳಾಗಿ

ಚಿಣ್ಣರ ಲೋಕದಿ ಬಣ್ಣಗಳೆಲ್ಲವೂ
ಸಣ್ಣವರೆನುತಲಿ ಬಂದಿಳಿದವು
ಕುಣಿಯುತಲಿದ್ದವು ಬಳಿ ಸುಳಿದು
ಮಣಿಯುತ ಮುಗ್ಧತೆಗೆ ಇಳೆಗೊಲಿದು

ಅಳುವ ಮೋರೆಯೊಳು ನಗುಹೂವ ಸೂಸುತ
ಸುಳಿವೀಯದೆ ಬಳಿಬಂದು ಹೊಳೆಹೊಳೆಯುತ
ಅಳಿಯದ ಬಣ್ಣಗಳಾಗಿ ಸುಂದರ ರೂಪಗಳಾಗುತ
ಸುಳಿದಾಡಿದವು ಬರಬರುತ ನವ ನವಿರಾಗುತ

ಕುಣಿಯುತ ನಲಿದಾಡುತ ಅನವರತ ಹೀಗಿರುತ
ಅಣಿಮಾಡುತ ಜೀವನವ ನವೀನವಾಗಿರಿಸುತ
ಗುಣ ಪರಿಪೂರ್ಣರಾಗುವತ್ತ ತಲ್ಲೀನವಾಗುತ
ಪಣತೊಡುವ ನಾವೆಲ್ಲ ಜೀವನದಿ ಹಸಿರಾಗಿರುತ

_ಶಶಿಜಿತ್

- m Jithendra_ಶಶಿಜಿತ್

02 Jun 2023, 11:42 pm
Download App from Playstore: