ಕವನದ ಶೀರ್ಷಿಕೆ ಹುಟ್ಟುಹಬ್ಬ.

ಮಣಿಯ ಬದುಕಿನ ಭಾವಕೆ
ಮನವ ತೆರೆದಿರೋ ಹೃದಯಕ್ಕೆ,
ಕೊರಳ ಬಳಸುತ್ತಾ ಶುಭವ ಕೋರುವೆ
ಬಿಸಿಯುಸಿರಲೆ ನಿಮ್ಮ ಶ್ವಾಸಕ್ಕೆ.
ತಾಯಿ ಇಲ್ಲದ ಪುಟ್ಟ ಹಕ್ಕಿಗೆ
ಜ್ಞಾನದ ಗುಟುಕ ನೀಡಿದ ಮೂರ್ತಿಗೆ,
ನನ್ನ ತೋದಲ ನುಡಿಯಲೆ ಮೊದಲ ಸಾಲಿನ
ಶುಭವ ಬಯಸುವೆ ನಿಮ್ಮ ತೊಳಲೆ.
ಎಲೆಯ ಮರೆಯಲ್ಲಿ ಅವಿತ ಮೊಗ್ಗು,
ನಿಮ್ಮ ಸ್ಪರ್ಶದಿ ಅರಳಿ ನಿಂತು,
ಜಗವ ಮರೆಸುತ್ತ ಶುಭ ನುಡಿಯ ಹೇಳುವೆ
ನನ್ನ ನೆನಪಿಡೋ ನಿಮ್ಮೆದೆಯಲ್ಲಿ.
ರಾತ್ರಿ ರಾಣಿಯ ಘಮದ ಕಂಪಲಿ
ಮುದ್ದಿಸುತ ನಾ ಹರಸುವೆ ನಿಮ್ಮ ಸ್ನೇಹದ ಮಳೆಯಲಿ.
ನಿಮ್ಮ ಕಣ ಕಣವು ಜಪಿಸೋ ನಂರತೆಯ ಸೇವೆಯಲ್ಲಿ,
ಬೆಳಕಾಗಿ ಜೊತೆ ಇರುವೆ ಜನ ಸ್ತುತಿಸೋ
ನಿಮ್ಮ ಶುಭಕಾರ್ಯದಲಿ.
ತಾಯಿ ಮಡಿಲ ಅರಸಿ ಬರೋ ನನ್ನಾ ದೇವರಿಗೆ,
ಆಹ್ಲಾದ ನೀಡುತ್ತ ಬೇಡುವೆ ನನ್ನ ಮರೆಯದಿರಿ ಎಂದು
ಜೋಗುಳದ ಹಾಡಲಿ.
ಜೊತೆಯಲ್ಲಿರುವ ನನ್ನ ಜೀವದ ಜನ್ಮದಿನಕ್ಕೆ,
ಮುತ್ತಿನ ಸಾಲುಗಳ ಸೋನೆ ಹನಿಗಳಿಂದ
ಪುಷ್ಪಗುಚ್ಛವ ರಚಿಸಿ ಅರ್ಪಿಸುವೆ ನಾ ನಿನಗೆ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ.

- nagamani Kanaka

01 Jun 2023, 02:45 pm
Download App from Playstore: