ನನ್ನ ಪ್ರೀತಿಯ ಬಯಕೆ.. ❤️
ನಗು ಮೊಗದ ಚೆಲುವನ ಕಾಣಲು
ಹಂಬಲಿಸುತಿದೆ ನನ್ನ ನಯನಗಳು
ಕುಡಿನೋಟವ ಬೀರು ಒಮ್ಮೆಯಾದರೂ...
ಕೋಮಲ ಸ್ಪರ್ಶದ ಸುಖವ ಸವಿಯಲು
ನನ್ನ ಒರಟು ಕೈಗಳು ಇಚ್ಛೆಸುತಿವಿ
ಒಮ್ಮೆ ನನ್ನ ಸೋಕಬಾರದೆ..?
ಬದುಕಿನ ಪಯಣವ ನಿನ್ನೊಡನೆ ಸವೆಯಲು
ಕಾತರಗೊoಡಿವೆ ನನ್ನ ಪಾದಗಳು
ಒಮ್ಮೆ ನನ್ನ ಜೊತೆಯಾಗಿ ಸಾಗಬಾರದೆ..?
ಬೆವರಿನ ಕಂಪನು ಸೆಳೆಯಲು
ನನ್ನ ನಾಸಿಕವು ತುಡಿಯುತಿದೆ
ಒಮ್ಮೆ ಘಮ ಸೋಸಬಾರದೆ..?
ಲೀಲಾಜಲವಾಗಿ ನುಡಿವ ಮಾತನ್ನು ಕೇಳಲು
ಪರಿತಪಿಸುತಿವೆ ನನ್ನ ಕರ್ಣಗಳು
ಒಮ್ಮೆ ಮಾತನಾಡಬಾರದೆ..?
ಮನದ ತುಂಬ ಮೂಡಿವೆ ನಿನ್ನ ಸೇರುವ ಬಯಕೆ
ಬಾಳಿಬಿಡು ಒಮ್ಮೆ ನನ್ನ ಬದುಕಿನ ಜೊತೆಗೆ.....
- bhagya g s
29 May 2023, 11:36 pm
Download App from Playstore: