ಏನ್ ಮಾಡಕ್ಕಾಗತ್ತೆ ಇದು ಉಳಿಗಾಲದ ಪ್ರಶ್ನೆ

ಚುಚ್ಚೋ ಹುಲ್ಲಲ್ಲಿ ಕೂಡೋಕ್ಕಾಗತ್ತಾ
ಬಿಚ್ಚದ ಮನಸಿಂದ ಹೇಳಕ್ಕಾಗತ್ತಾ

ಮುಚ್ಚಿದ ಪಾತ್ರೆಯಲ್ಲಿ ಹಾಕೋಗಾಗತ್ತ
ಮೆಚ್ಚದ ಸ್ವರಗಳ ಹಾಡೋಕ್ಕಾಗತ್ತಾ

ತಟ್ಟೆಯಲಿ ನೀರು ಕುಡಿಯೋಕ್ಕಾಗತ್ತಾ
ಬಟ್ಟೆಯಲ್ ನೆನೆದು ಕೂಡಕ್ಕಾಗತ್ತಾ

ಗಾಳಿಯನು ಕೈಯಲ್ಲಿ ಹಿಡಿಯಕ್ಕಾಗತ್ತಾ
ಗೂಳಿಯನು ಬರಿಗೈಯಲ್ಲಿ ಗೆಲ್ಲಕ್ಕಾಗತ್ತಾ

ಅಂಗೈ ನೀರಲಿ ಮುಳುಗೋಕ್ಕಾಗತ್ತಾ
ಮುಂಗೈಯಲ್ಲಿ ಊರಿ ನಡೆಯಕ್ಕಾಗತ್ತಾ

ಏನ್ ಮಾಡಕ್ಕಾಗತ್ತೆ

ಇದು ಉಳಿಗಾಲದ ಪ್ರಶ್ನೆ !!

- m Jithendra_ಶಶಿಜಿತ್

10 May 2023, 12:33 am
Download App from Playstore: