ಸ್ನೇಹಿತೆಗೊಂದು ಕವನ
ಇರಬೇಕು ಒಬ್ಬಳು ಸ್ನೇಹಿತೆ ಅಳುವಾಗ ನಗಿಸಲು
ಇರಬೇಕು ಸ್ನೇಹಿತೆ ಮನದ ಮಾತಿಗೆ ಕಿವಿಗೊಡಲು
ಇರಬೇಕು ಸ್ನೇಹಿತೆ ಎಷ್ಟೇ ದೂರ ಇದ್ದರೂ ಸನಿಹವೇ ಇದ್ದಾಳೇನೋ ಅನ್ನುವ ನಂಬಿಕೆ ಹುಟ್ಟಿಸುವಂತೆ
ಇರಬೇಕು ನಮ್ಮಿಬ್ಬರ ದೂರವಾಣಿ ಸಂಭಾಷಣೆ
ಇರಬೇಕು ಒಬ್ಬಳು ಸ್ನೇಹಿತೆ ನಾ ಬಯ್ಯುತ್ತಿದ್ದರು ಅದೇನೋ ಅವಳಿಗೆ ಕೇಳಲು ಇಂಪಾದ ಸಂಗೀತವೆನಿಸುವಂತೆಅವಳು ಬೀರುವ ಕಿರುನಗು
ಇರಬೇಕು ಒಬ್ಬಳು ಸ್ನೇಹಿತೆ ನಾ ಹೇಳಿದ ಮಾತನ್ನು ಅವಳು ಮಾತ್ರ ಕೇಳಿ ಆ ವಿಷಯಗಳ ಇನ್ನೊಬ್ಬರಿಗೆ ಹಂಚದೆ ಮನಸ್ಸಿನಲ್ಲೇ ಸಮಾಧಿ ಮಾಡುವ ಅವಳ ಗುಣ ಅದು ಅವಳ ಹಿರಿಮೆಗೆ ಹಿಡಿದ ಕನ್ನಡಿ
ಇದು ನನ್ನ ಸ್ನೇಹಿತೆಯೋರ್ವಳ ಗುಣ ಸ್ವಭಾವ
ಅವಳು ನನ್ನ ಅಚ್ಚುಮೆಚ್ಚಿನವರ ಪಟ್ಟಿಯಲ್ಲಿ ಮೊದಲು ನಿಲ್ಲುವ ಗೌರವ ಅತಿಥಿ...
❤️❤️
- Bindu_R@
06 May 2023, 09:35 pm
Download App from Playstore: